ಕರ್ನಾಟಕ

karnataka

ETV Bharat / bharat

ಕೆಬಿಸಿಯಲ್ಲಿ ಭಾಗವಹಿಸಿದ್ದ ವೈದ್ಯೆ ಸಾವನ್ನಪ್ಪಿದಾಗ ಬೆಂಗಳೂರಿನಲ್ಲೇ ಇದ್ದ ಆಕೆಯ ತಾಯಿ... ಇಂದು ದೀಪಾ ಅಂತ್ಯಕ್ರಿಯೆ! - ಕೆಬಿಸಿಯಲ್ಲಿ ಭಾಗವಹಿಸಿದ್ದ ವೈದ್ಯೆ ಭೂಕುಸಿತದಲ್ಲಿ ಸಾವು

ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯೆ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾಗ ಆಕೆಯ ತಾಯಿ ಬೆಂಗಳೂರಿನಲ್ಲೇ ಇದ್ದಿದ್ದು, ಇಂದು ದೀಪಾ ಅಂತ್ಯಕ್ರಿಯೆ ರಾಜಸ್ಥಾನದ ಜೈಪೂರಿನಲ್ಲಿ ನಡೆಯಲಿದೆ.

Rajasthan News  Jaipur News  Dr. Deepa  Dr. Deepa will be cremated on Tuesday in Jaipur  People paid tribute on social media  Kinnaur Landslide  Kinnaur landslide accident  ಕೆಬಿಸಿಯಲ್ಲಿ ಭಾಗವಹಿಸಿದ್ದ ವೈದ್ಯೆ  ಕೆಬಿಸಿಯಲ್ಲಿ ಭಾಗವಹಿಸಿದ್ದ ವೈದ್ಯೆ ಭೂಕುಸಿತದಲ್ಲಿ ಸಾವು  ಕೆಬಿಸಿಯಲ್ಲಿ ಭಾಗವಹಿಸಿದ್ದ ವೈದ್ಯೆ ದೀಪಾ ಅಂತ್ಯಕ್ರಿಯೆ
ಕೆಬಿಸಿಯಲ್ಲಿ ಭಾಗವಹಿಸಿದ್ದ ವೈದ್ಯೆ ದೀಪಾ

By

Published : Jul 27, 2021, 7:30 AM IST

ಜೈಪುರ:ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಭೂಕುಸಿತ ಸಂಭವಿಸಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಜೈಪುರದ ಡಾ.ದೀಪ ಶರ್ಮಾ ಸಹ ಒಬ್ಬರಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ಜೈಪುರದಲ್ಲಿ ನೆರವೇರಿಸಲಾಗುವುದು.

ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಭೂಕುಸಿತ ಸಂಭವಿಸಿದ ಭಯಾನಕ ದೃಶ್ಯ

ಶಾಹೀನ್ ಬಾಗ್‌ ಪ್ರತಿಭಟನೆಯಲ್ಲಿ ಭಾಗಿ: ವೈದ್ಯೆ ದೀಪಾ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಅವರು ಟ್ವಿಟರ್‌ನಲ್ಲಿ 22 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​ನ್ನು ಹೊಂದಿದ್ದಾರೆ. ಇದಲ್ಲದೆ, ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವೈದ್ಯ ಭಾಗಿಯಾಗಿದ್ದರು. ನಂತರ ಶಾಹೀನ್ ಬಾಗ್ ಪ್ರತಿಭಟನೆ ಸಂದರ್ಭದಲ್ಲಿ ನನಗೂ ಸಹ ದೌರ್ಜನ್ಯ ಎಸಗಲಾಗಿದೆ ಎಂದು ದೀಪಾ ಆರೋಪಿಸಿದ್ದರು.

ಜೈಪುರದಲ್ಲಿ ಅಂತ್ಯಕ್ರಿಯೆ...:ಡಾ. ದೀಪಾ ಚಿಟ್ಕುಲ್​ನಿಂದ ಹಿಂದಿರುಗುತ್ತಿದ್ದಾಗ, ಸುಮಾರು 13 ಕಿ.ಮೀ ದೂರದಲ್ಲಿರುವ ಬಟ್ಸೆರಿಯಲ್ಲಿ ಭೂಕುಸಿತದಿಂದಾಗಿ ಪರ್ವತಗಳಿಂದ ಕಲ್ಲುಗಳ ಉರುಳಲು ಪ್ರಾರಂಭವಾಯಿತು. ಪರಿಣಾಮವಾಗಿ ದೀಪಾ ಸೇರಿದಂತೆ 9 ಜನರು ಸಾವನ್ನಪ್ಪಿದರು. ದೀಪಾ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಓದಿ:ಪತ್ನಿಯ ಬಾಯ್​ಫ್ರೆಂಡ್​ ಖಾಸಗಿ ಭಾಗಕ್ಕೆ ಗುಂಡು ಹಾರಿಸಿದ ಗಂಡ!

ದೀಪಾ ಸಹೋದರ ಮಹಾರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಕೆಯ ಸಹೋದರಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪಘಾತದ ಸಂದರ್ಭದಲ್ಲಿ ಅವರ ತಾಯಿ ಬೆಂಗಳೂರಿನಲ್ಲಿದ್ದರು. ಪ್ರಸ್ತುತ, ದೀಪಾ ಅವರ ಕುಟುಂಬ ದೆಹಲಿಯನ್ನು ತಲುಪಿದ್ದು, ಮಂಗಳವಾರ ದೀಪಾ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಬಳಿಕ ದೀಪಾ ಅಂತ್ಯಕ್ರಿಯೆ ಜೈಪುರದಲ್ಲಿ ನಡೆಸಲಾಗುವುದು.

ದೀಪಾ ಕೆಬಿಸಿ ಸ್ಪರ್ಧಾಳು..: ಅಮಿತಾಬಚ್ಚನ್​ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಡಾಕ್ಟರ್ ದೀಪಾ ಕೂಡ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಅವರು ಸುಮಾರು 6 ಲಕ್ಷ ರೂಪಾಯಿಗಳನ್ನು ಸಹ ಗೆದ್ದಿದ್ದರು. ಇದರ ಜೊತೆಗೆ, ಆತಿಥೇಯ ಅಮಿತಾಬ್ ಬಚ್ಚನ್ ಅವರೊಂದಿಗಿನ ಅನೇಕ ಚಿತ್ರಗಳನ್ನು ಡಾ.ದೀಪಾ ಅವರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಕೆಬಿಸಿಯಲ್ಲಿ ಭಾಗವಹಿಸಿದ್ದ ವೈದ್ಯೆ ದೀಪಾಳ ಕೊನೆಯ ಪೋಸ್ಟ್​

ಟ್ವೀಟ್​ ಮಾಡಿ ಅರ್ಧ ಗಂಟೆಯಲ್ಲೇ ಸಾವು!:ಡಾ. ದೀಪಾ ಶರ್ಮಾ ಅವರು ಜುಲೈ 25ರ ಮಧ್ಯಾಹ್ನ 12.59ಕ್ಕೆ ಟ್ವಿಟರ್​ನಲ್ಲಿ ತಮ್ಮ ಕೊನೆಯ ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ಐಟಿಬಿಪಿ ಚೆಕ್ - ಪೋಸ್ಟ್ ಹತ್ತಿರದ ಬೋರ್ಡ್ ಬಳಿ ನಿಂತಿರುವ ದೃಶ್ಯ ಇದೆ. 'ನಾನು ಭಾರತದ ಕೊನೆಯ ಹಂತದಲ್ಲಿ ನಿಂತಿದ್ದೇನೆ. ಇಲ್ಲಿಂದ ಸುಮಾರು 80 ಕಿ.ಮೀ ದೂರದಲ್ಲಿ ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಟಿಬೆಟ್‌ನ ಗಡಿ ಇದೆ.' ಎಂದು ಕ್ಯಾಪ್ಸನ್​ ಕೊಟ್ಟು ತಮ್ಮ ಫೋಟೋವನ್ನ ಟ್ವೀಟ್​ ಮಾಡಿದ್ದರು. ಇದಾದ ಅರ್ಧ ಗಂಟೆಯಲ್ಲಿ ಅವರು ಭೂಕುಸಿತ ಅವಘಡದಲ್ಲಿ ಅಸುನೀಗಿದ್ದರು.

ABOUT THE AUTHOR

...view details