ಕರ್ನಾಟಕ

karnataka

By

Published : May 7, 2022, 6:14 PM IST

ETV Bharat / bharat

ಆಸ್ಪತ್ರೆಯಲ್ಲಿ ವೈದ್ಯರು ಗೈರು.. ಸ್ಟ್ರೇಚರ್​​ನಲ್ಲಿ ಡಾಕ್ಟರ್​​ ನಿವಾಸಕ್ಕೆ ರೋಗಿ ಕರೆದೊಯ್ದ ಕುಟುಂಬಸ್ಥರು!

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ರೋಗಿಯ ಕುಟುಂಬಸ್ಥರು ಸ್ಟ್ರೇಚರ್​​ನಲ್ಲೇ ಡಾಕ್ಟರ್​ ನಿವಾಸಕ್ಕೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ.

patient on stretcher to doctor's house
patient on stretcher to doctor's house

ಬೈಕುಂತ್​​ಪುರ(ಛತ್ತೀಸ್​​ಗಢ): ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿರುವುದಕ್ಕಿಂತಲೂ ಹೆಚ್ಚಾಗಿ ಮನೆ ಅಥವಾ ತಮ್ಮ ತಮ್ಮ ಖಾಸಗಿ ಆಸ್ಪತ್ರೆ​ಗಳಲ್ಲಿರುವುದೇ ಹೆಚ್ಚು. ಬಹುತೇಕ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕಂಡು ಬರುವ ದೃಶ್ಯ ಇದಾಗಿದೆ. ಸದ್ಯ ನಾವು ಹೇಳುತ್ತಿರುವ ಸ್ಟೋರಿ ಕೂಡ ಇದೇ ವಿಷಯಕ್ಕೆ ಸಂಬಂಧಪಟ್ಟಿದೆ.

ಛತ್ತೀಸ್​ಗಢದ ಕೊರಿಯಾದ ಬೈಕುಂತ್​​ಪುರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಅವರ ಸಂಬಂಧಿಕರು ಸ್ಟ್ರೇಚರ್​​ನಲ್ಲಿ ವೈದ್ಯರ ನಿವಾಸಕ್ಕೆ ರೋಗಿ ಕರೆದುಕೊಂಡು ಹೋಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಸ್ಪತ್ರೆಯ ಸಿವಿಲ್​ ಸರ್ಜನ್​ ಕೆ.ಎಲ್​ ಧ್ರುವ, ರೋಗಿಗೆ ಪ್ರಮುಖ ವೈದ್ಯರಿಂದ ಚಿಕಿತ್ಸೆ ನೀಡಬೇಕೆಂದು ಕುಟುಂಬಸ್ಥರು ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸ್ಟಾಲಿನ್​ ಸರ್ಕಾರಕ್ಕೆ ಒಂದು ವರ್ಷ: ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಉಚಿತ ಉಪಾಹಾರ ಯೋಜನೆ ಘೋಷಣೆ

ಈ ಬಗ್ಗೆ ನಾನು ವಿಚಾರಣೆ ನಡೆಸಿದ್ದೇನೆ. ಕುಟುಂಬಸ್ಥರು ರೋಗಿ ಜೊತೆ ಮಧ್ಯಾಹ್ನ 1:30ಕ್ಕೆ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ, ಮುಖ್ಯ ವೈದ್ಯರಿಂದ ರೋಗಿ ಪರೀಕ್ಷೆ ಮಾಡುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ ಯಾರಿಗೂ ಹೇಳದೆ ಸ್ಟ್ರೆಚರ್​ನಲ್ಲಿ ವೈದ್ಯರ ನಿವಾಸಕ್ಕೆ ರೋಗಿಯನ್ನ ಕರೆದೊಯ್ದಿದ್ದಾರೆ. ಅಲ್ಲಿಯೇ ಅವರನ್ನ ಪರೀಕ್ಷೆಗೊಳಪಡಿಸಿರುವ ವೈದ್ಯರು, ಆಸ್ಪತ್ರೆಯಲ್ಲಿ ದಾಖಲು ಮಾಡುವಂತೆ ಸೂಚನೆ ನೀಡಿದ್ದಾರೆಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ಇರಲಿಲ್ಲವೇ ಎಂಬ ಪ್ರಶ್ನೆಗೆ ಒಪಿಡಿ 1 ಗಂಟೆಗೆ ಬಂದ್ ಮಾಡಲಾಗುತ್ತದೆ. ಆದರೆ, ಮಧ್ಯಾಹ್ನ 1:30ಕ್ಕೆ ಈ ಘಟನೆ ಸಂಭವಿಸಿದೆ. ನಾನು ಮಧ್ಯಾಹ್ನ 2:30ರವರೆಗೂ ಆಸ್ಪತ್ರೆಯಲ್ಲಿದ್ರೂ, ನನಗೆ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದರು.

ABOUT THE AUTHOR

...view details