ಕರ್ನಾಟಕ

karnataka

ETV Bharat / bharat

ಹಳಿ ಮೇಲೆ ಸೆಲ್ಫಿ ಕ್ಲಿಕ್ಕಿಸುವಾಗ ಮೈಮರೆತ ಯುವಕರು.. ಮಾವನ ಮನೆಗೆ ಬಂದವರು ರೈಲು ಡಿಕ್ಕಿಯಾಗಿ ಮಸಣ ಸೇರಿದ್ರು - ಉತ್ತರಾಖಂಡ್​ನಲ್ಲಿ ರೈಲ್ವೆ ದುರಂತ

ರುದ್ರಪುರ್​ನ ಮಾವನ ಮನೆಗೆಂದು ಆಗಮಿಸಿದ್ದ ಇಬ್ಬರು ಯುವಕರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ರೈಲು ಹಳಿ ಬಳಿ ಆಗಮಿಸಿದ್ದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸುವಾಗ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.

train-hits-two-friends-who-were-taking-selfie-on-track-both-die
ರೈಲ್ವೆ ಹಳಿ ಮೇಲೆ ಸೆಲ್ಫಿ ಕ್ಲಿಕ್ಕಿಸುವಾಗ ರೈಲು ಡಿಕ್ಕಿ

By

Published : Dec 4, 2021, 8:27 PM IST

ರುದ್ರಪುರ್ (ಉತ್ತರಾಖಂಡ್​):ಸೆಲ್ಫಿ ಕ್ಲಿಕ್ಕಿಸಲು ರೈಲ್ವೆ ಹಳಿ ಮೇಲೆ ನಿಂತಿದ್ದ ಇಬ್ಬರು ಯುವಕರಿಗೆ ರೈಲು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರುದ್ರಪುರ್​​ನ ಶಾಂತಿ ಬಿಹಾರ್ ಬಳಿ ನಡೆದಿದೆ. ಸೆಲ್ಫಿ ಕ್ಲಿಕ್ಕಿಸಲೆಂದು ಹಳಿ ಮೇಲೆ ನಿಂತಾಗ ಹಿಂದಿನಿಂದ ವೇಗವಾಗಿ ಬಂದ ರೈಲು ಡಿಕ್ಕಿಯಾಗಿದೆ.

ಮೃತರನ್ನು ಅಲ್ಮೋರಾ ಬಳಿಯ ಆಡಮ್ ಶಾಲೆಯ ಕಾಲೋನಿ ನಿವಾಸಿ ಲೋಕೇಶ್ ಲೊಹಾನಿ (35), ಜಲ್ ನಿಗಮ್ ಕಾಲೋನಿ ನಿವಾಸಿ ಮನೀಶ್ ಕುಮಾರ್ (25) ಎಂದು ಗುರುತಿಸಲಾಗಿದೆ.

ರೈಲು ಡಿಕ್ಕಿಯಾದ ರಭಸಕ್ಕೆ ಇಬ್ಬರು ತೂರಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರುದ್ರಪುರ್​ನ ಮಾವನ ಮನೆಗೆಂದು ಆಗಮಿಸಿದ್ದ ಈ ಇಬ್ಬರು ಯುವಕರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ರೈಲು ಹಳಿ ಬಳಿ ಆಗಮಿಸಿದ್ದರು. ಡೆಹ್ರಾಡೂನ್​​ನಿಂದ ಕತ್ಗೊಡಮ್​​​ಗೆ ತೆರಳುತ್ತಿದ್ದ ರೈಲು ಡಿಕ್ಕಿಯಾದ ಪರಿಣಾಮ ದೇಹಗಳು ಛಿದ್ರವಾಗಿದ್ದವು.

ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಎ​ಎಸ್​ಐ ಸತೀಶ್ ಕಪ್ರಿ ಭೇಟಿ ನೀಡಿ ಪರಿಶೀಲನೆ ಬಳಿಕ ಮೃತದೇಹ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ:ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರದೊಂದಿಗೆ ಮಾತುಕತೆ.. ಮಾಹಿತಿ ನೀಡಿದ ಸಂಯುಕ್ತ ಕಿಸಾನ್​​ ಮೋರ್ಚಾ

ABOUT THE AUTHOR

...view details