ಪುಣೆ(ಮಹಾರಾಷ್ಟ್ರ): ಮಾಟಮಂತ್ರ ಮಾಡುತ್ತಿದ್ದಳೆಂದು ಅತ್ತಿಗೆಯನ್ನು ಮೈದುನೊಬ್ಬ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ಚಂದನ್ ನಗರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಶ್ರೀನಿವಾಸ್ ಶ್ರೀರಾಮ್ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯ ಹೆಸರು ಲಕ್ಷ್ಮೀಬಾಯಿ ಶ್ರೀರಾಮ್ ಎಂದು ಗುರುತಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಅತ್ತಿಗೆ:ಬಂಧಿತಆರೋಪಿ ಶ್ರೀನಿವಾಸ್ ಶ್ರೀರಾಮ್ ಈ ಹಿಂದೆ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ವಾಸವಾಗಿದ್ದರು. ನಂತರ ಅವರು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಶ್ರೀನಿವಾಸ್ಗೆ ಸಾಗರ್ ಎಂಬ ಸ್ನೇಹಿತನಿದ್ದಾರೆ. ಶುಕ್ರವಾರ (ನ.11) ಮಧ್ಯಾಹ್ನ ಸಾಗರ್ ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವಿತ್ತು. ಈ ಹಿನ್ನೆಲೆ ಲಕ್ಷ್ಮೀಬಾಯಿಯನ್ನು ಸಾಗರ್ ಮನೆಗೆ ಕರೆದಿದ್ದರು. ಸಾಗರ್ ಮತ್ತು ಆತನ ಪತ್ನಿ ಪೂಜಾ ಸಾಮಗ್ರಿಗಳನ್ನು ತರಲು ಹೊರಗೆ ಹೋಗಿದ್ದರು. ಆ ವೇಳೆ ಶ್ರೀನಿವಾಸ್ ಲಕ್ಷ್ಮೀಬಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.