ತಳಿ(ತಮಿಳುನಾಡು):ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೆಲ ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದ ಸೇಡಿಗಾಗಿ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಬುಲೆಟ್ ಚೆನ್ನಕೃಷ್ಣ. ಸಂಬಂಧಿಗಳಿಂದಲೇ ಕೊಲೆಯಾದವ. ತಮಿಳು ನಾಡಿನ ಹುಲಿ ಬಂಡೆ ಗ್ರಾಮದಲ್ಲಿ ಈ ಘಟನೆ ಜರುಗಿದೆ. ರಾತ್ರಿ ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರದ ಗುಂಗಿನಲ್ಲಿ ಮಾತನಾಡಲು ಕರೆಯಿಸಿಕೊಂಡ ಕೊಲೆಗಾರರ ತಂಡ ಚೆನ್ನಕೃಷ್ಣನ ತಲೆ ಮೇಲೆ ಟ್ರ್ಯಾಕ್ಟರ್ ಹರಿಸಿ ಗಾಯಗೊಳಿಸಿದ್ದರು. ಆಗಲೂ ಪ್ರಾಣ ಹೋಗದಿದ್ದಾಗ ಕೆಳಗೆ ಬಿದ್ದವನ ಮೇಲೆ ಮೂರು ಸೈಜುಗಲ್ಲುಗಳನ್ನು ತಲೆ ಮೇಲೆ ಹಾಕಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.