ಕಾಸ್‌ಗಂಜ್ (ಉತ್ತರ ಪ್ರದೇಶ): ಚಿಕಿತ್ಸೆಯ ಹೆಸರಿನಲ್ಲಿ ಗೃಹ ರಕ್ಷಕರೊಬ್ಬರ ಕಿಡ್ನಿಯನ್ನೇ ಹೊರತೆಗೆದಿರುವ ಘಟನೆ ಇಲ್ಲಿನ ಅಲಿಗಢದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಅಚ್ಚರಿಯ ಸಂಗತಿಯೆಂದ್ರೆ ಕಿಡ್ನಿ ಕಳೆದುಕೊಂಡು ಎಂಟು ತಿಂಗಳ ಬಳಿಕ ಈ ವಿಷಯ ಗೊತ್ತಾಗಿದೆ.
ಕಸ್ಗಂಜ್‌ನಲ್ಲಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಗೃಹರಕ್ಷಕರಾಗಿ ಕೆಲಸ ಮಾಡುತ್ತಿರುವ ಸುರೇಶ್ ಚಂದ್ರ ಕಿಡ್ನಿ ಕಳೆದುಕೊಂಡಿದ್ದಾರೆ. 2022ರ ಏಪ್ರಿಲ್ 12ರಂದು ಪರೀಕ್ಷಿಸಿದ ನಂತರ ನನ್ನ ಎಡಭಾಗದ ಮೂತ್ರಪಿಂಡದಲ್ಲಿ ಕಲ್ಲು ಇರುವ ಬಗ್ಗೆ ತಿಳಿಯಿತು. 2022ರ ಏಪ್ರಿಲ್ 14ರಂದು ಅಲಿಗಢದ ಪ್ಯಾರಿ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್ ತೆಗೆಯುವ ಶಸ್ತ್ರಚಿಕಿತ್ಸೆ ನಡೆಯಿತು.
ಸುಮಾರು ಎಂಟು ತಿಂಗಳ ಬಳಿಕ ನನ್ನ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತು. ನಂತರ ನಾನು ಮತ್ತದೇ ಆಸ್ಪತ್ರೆಗೆ ತೆರಳಿ ಅಲ್ಟ್ರಾಸೌಂಡ್ ಮಾಡಿಸಿದ್ದೆ. ಪರೀಕ್ಷೆಗೆ ಒಳಗಾದ ನಂತರ ಎಡ ಮೂತ್ರಪಿಂಡ ಕಾಣೆಯಾಗಿರುವುದು ತಿಳಿಯಿತು ಎಂದು ಅವರು ಹೇಳಿದ್ದಾರೆ.
ಅಲ್ಟ್ರಾಸೌಂಡ್ ಉದ್ಯೋಗಿ ರಣಬೀರ್ ಚೌಹಾಣ್ ಅವರು ಪಾರಿ ಆಸ್ಪತ್ರೆಯಲ್ಲಿ ಮೂತ್ರಪಿಂಡದ ಕಲ್ಲು ತೆಗೆಸುವಂತೆ ಸೂಚಿಸಿದ್ದರು. ಹಣದ ಬಗ್ಗೆ ಚಿಂತಿಸಬೇಡಿ ಎಂದು ಧೈರ್ಯ ತುಂಬಿದ್ದರು. ಅವರ ಮಾತಿನಂತೆ ಶಸ್ತ್ರಚಿಕಿತ್ಸೆಗೆ ಒಳಗಾದೆ. ಹೊಟ್ಟೆ ನೋವು ಉಲ್ಬಣಿಸಿದಾಗ ಈ ವಿಷಯ ಬೆಳಕಿಗೆ ಬಂತು ಎಂದು ಸುರೇಶ್ ವಿವರಿಸಿದರು.
ಇದನ್ನೂ ಓದಿ:ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಕಿಡ್ನಿ ಹೊತ್ತು ಮಂಗಳೂರಿನತ್ತ ಸಾಗಿದ ಆಂಬ್ಯುಲೆನ್ಸ್