ಕರ್ನಾಟಕ

karnataka

ETV Bharat / bharat

ಮೋದಿ ಕುರಿತ ಹಳೆ ಟ್ವೀಟ್‌ ವೈರಲ್ ವಿಚಾರ: ಕಾಂಗ್ರೆಸ್‌ ವಿರುದ್ಧ ಖುಷ್ಬೂ ಸುಂದರ್ ವಾಗ್ದಾಳಿ - ಕಾಂಗ್ರೆಸ್​

ಬಿಜೆಪಿ ನಾಯಕಿ, ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಅವರ ಹಳೆಯದ್ದೊಂದು ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದು, ರಾಜಕೀಯ ಕೆಸರೆರಚಾಟಕ್ಕೆ ವಿಷಯವಾಗಿದೆ.

Khushbu Sunder
ಖುಷ್ಬು ಸುಂದರ್

By

Published : Mar 26, 2023, 8:12 AM IST

ಚೆನ್ನೈ(ತಮಿಳುನಾಡು): 2019ರ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕಾರಣಕ್ಕೆ ರಾಹುಲ್ ಗಾಂಧಿ ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದು, ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ತಮಿಳುನಾಡಿನ ಬಿಜೆಪಿ ನಾಯಕಿ ಹಾಗು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ಖುಷ್ಬೂ ಸುಂದರ್ ಅವರು ಈ ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿದ್ದಾಗ ಮಾಡಿರುವ ಟ್ವೀಟ್‌ವೊಂದು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿದೆ.

ಖುಷ್ಬೂ ಟ್ವೀಟ್ ಏನಾಗಿತ್ತು?: "ಮೋದಿ ಅಲ್ಲಿದ್ದಾರೆ, ಮೋದಿ ಇಲ್ಲಿದ್ದಾರೆ. ಮೋದಿ ಎಲ್ಲೆಡೆ ಇದ್ದಾರೆ. ಆದರೆ ಏನಿದು? ಮೋದಿ ಎಲ್ಲಿದ್ದಾರೋ ಅಲ್ಲಿ ಭ್ರಷ್ಟಾಚಾರವೇ ಉಪನಾಮೆಯಾಗಿದೆ. ಹಾಗಾಗಿ ಮೋದಿ ಅಂದ್ರೆ ಭ್ರಷ್ಟಾಚಾರ ಎಂಬುದನ್ನು ಅರಿತುಕೊಳ್ಳಿ" ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಸಮರ್ಥನೆ ನೀಡಿರುವ ಖುಷ್ಬೂ, "ನಾನು ಆಗ ಕಾಂಗ್ರೆಸ್ ವಕ್ತಾರೆಯಾಗಿದ್ದೆ. ರಾಹುಲ್ ಗಾಂಧಿ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೆ" ಎಂದಿದ್ದಾರೆ.

ಖುಷ್ಬೂ ಮಾಡಿರುವ ಐದು ವರ್ಷಗಳ ಹಿಂದಿನ ಟ್ವೀಟ್‌ ಅನ್ನು ಇದೀಗ ಕಾಂಗ್ರೆಸ್ ಐಟಿ ವಿಭಾಗ ಹೊರ ತೆಗೆದಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೇ ಪ್ರತಿಕ್ರಿಯಿಸಿದ ಖುಷ್ಬೂ, "ಅವರು ಅದೆಷ್ಟು ಹತಾಶೆರಾಗಿದ್ದಾರೆ! ಕಾಂಗ್ರೆಸ್‌ನವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ನನ್ನ 5 ವರ್ಷಗಳ ಹಿಂದಿನ ಟ್ವೀಟ್ ಬೇಕಾಯಿತು. ನಾನು ಕಾಂಗ್ರೆಸ್‌ ವಕ್ತಾರೆಯಾಗಿದ್ದಾಗ ರಾಹುಲ್ ಗಾಂಧಿ ಅವರ ಭಾಷೆಯನ್ನು ಬಳಸಬೇಕಿತ್ತು. ನಿಮಗೆ ಧೈರ್ಯವಿದ್ದರೆ ನನ್ನ ಮೇಲೆ ಪ್ರಕರಣ ದಾಖಲಿಸಿ. ಭ್ರಷ್ಟಾಚಾರ ಮತ್ತು ಕಳ್ಳನ ನಡುವಿನ ವ್ಯತ್ಯಾಸವನ್ನು ನೀವು ಅರಿಯಿರಿ" ಎಂದು ಖಾರವಾಗಿ ಪ್ರತ್ಯುತ್ತರ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಏನೂ ಬದಲಾಗಿಲ್ಲ ಎಂದು ಹೇಳಿರುವ ಅವರು, "ನಾನು ಬಿಜೆಪಿಯ ವಕ್ತಾರೆ ಅಲ್ಲ ಎನ್ನುವುದನ್ನು ಕಾಂಗ್ರೆಸ್‌ ಪಕ್ಷದ ಅನುಭವಿ ನಾಯಕರು ತಿಳಿಯಬೇಕು. ಮುಜುಗರದಿಂದ ತಪ್ಪಿಸಿಕೊಳ್ಳಲು ಬೇಕಿರುವ ವಿಧಾನಗಳ ಬಗ್ಗೆ ಕನಿಷ್ಠ ಪೂರ್ವಸಿದ್ಧತೆಗಳನ್ನಾದರೂ ಮಾಡಿಕೊಳ್ಳಿ. ಕಾಂಗ್ರೆಸ್‌ ಪಕ್ಷದಲ್ಲಿ ಏನೂ ಬದಲಾಗಿಲ್ಲ, ಯಾವತ್ತಿಗೂ ಬದಲಾಗುವುದೂ ಇಲ್ಲ" ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:ಸ್ತ್ರೀ ರೂಪದಲ್ಲಿ ಹಬ್ಬ ಆಚರಿಸುವ ಪುರುಷರು... ಈ ದೇವಸ್ಥಾನದಲ್ಲಿದೆ ವಿಶಿಷ್ಟ ಆಚರಣೆ!

ABOUT THE AUTHOR

...view details