ಕರ್ನಾಟಕ

karnataka

ETV Bharat / bharat

ನವೆಂಬರ್ 12 ರಂದು ಗುಜರಾತ್ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಖರ್ಗೆ - ಗುಜರಾತ್ ಪ್ರಣಾಳಿಕೆ

ಇತ್ತೀಚಿನ ಮೋರ್ಬಿ ಸೇತುವೆ ಕುಸಿತದ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಸೇತುವೆ ದುರ್ಘಟನೆಯು ದುರಸ್ತಿಯಲ್ಲಿ ತೊಡಗಿದ್ದ ಭ್ರಷ್ಟಾಚಾರದಿಂದ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

Kharge to release Gujarat Manifesto on November 12
ನವೆಂಬರ್ 12 ರಂದು ಗುಜರಾತ್ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಖರ್ಗೆ

By

Published : Nov 9, 2022, 4:46 PM IST

ನವದೆಹಲಿ:ನವೆಂಬರ್ 12 ರಂದು ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲ್ಲಿದ್ದು, ಆ ಸಂದರ್ಭದಲ್ಲಿ ಎಲ್ಲ ಹಿರಿಯ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಐಸಿಸಿಯ ಹಿರಿಯ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.

ಖರ್ಗೆ ಅವರು ಉದ್ಯಮ, ಸಾಮಾಜಿಕ ಕ್ಷೇತ್ರ ಮತ್ತು ವಿವಿಧ ಸಮುದಾಯಗಳಿಗೆ ಸಂಬಧಿಸಿದಂತೆ ಪಕ್ಷದ ಕಲ್ಯಾಣ ಕಾರ್ಯಸೂಚಿಯಲ್ಲಿ ವಿವರಿಸಲಿದ್ದಾರೆ ಎಂದು ಕಾಂಗ್ರೆಸ್​​ ಮೂಲಗಳು ಬುಧವಾರ ತಿಳಿಸಿವೆ.

ಉದ್ಯೋಗ, ಆರೋಗ್ಯಕ್ಕೆ ಹೆಚ್ಚು ಆದ್ಯತೆ ಸಾಧ್ಯತೆ:ಈ ಬಾರಿಯ ಪ್ರಣಾಳಿಕೆಯು ಉದ್ಯೋಗಗಳಿಗೆ ,ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಒತ್ತು ನೀಡಬಹುದು ಮತ್ತು 5 ಲಕ್ಷ ಸರ್ಕಾರಿ ಉದ್ಯೋಗಗಳನ್ನು ದೊರಕಿಸಬಹುದು ಮತ್ತು ಒಂದು ವರ್ಷದೊಳಗೆ ಗುತ್ತಿಗೆ ವ್ಯವಸ್ಥೆ ಕೊನೆಗೊಳಿಸಬಹುದು ಹಾಗೆ ಎರಡು ವರ್ಷಗಳಲ್ಲಿ ಹೆಚ್ಚುವರಿ 5 ಲಕ್ಷ ಉದ್ಯೋಗಗಳನ್ನು ಮತ್ತು 2024 ರ ವೇಳೆಗೆ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವತ್ತ ಗಮನಹರಿಸಲಿದೆ. ಇವುಗಳಲ್ಲಿ ಸುಮಾರು 5 ಲಕ್ಷ ಉದ್ಯೋಗಗಳು ಮಹಿಳೆಯರಿಗೆ ಮೀಸಲಾಗಿರಬಹುದು.

ಯುವಕರಿಗೆ 2 ಸಾವಿರ ನಿರುದ್ಯೋಗ ಭತ್ಯೆ ಘೋಷಣೆ ಸಾಧ್ಯತೆ:ಯುವಕರಿಗೆ ತಲಾ 2,000 ರೂಪಾಯಿ ನಿರುದ್ಯೋಗ ಭತ್ಯೆ, ರೈತರನ್ನು ಗುರಿಯಾಗಿಸಿಕೊಂಡು ಪಣಾಳಿಕೆ ಭರವಸೆಯನ್ನು ನೀಡುವ ಸಾಧ್ಯತೆಗಳಿವೆ. ಪ್ರಣಾಳಿಕೆ ಸುಮಾರು 40 ವಿಧಾನಸಭಾ ಸ್ಥಾನಗಳ ಮೇಲೆ ಪ್ರಭಾವ ಬೀರುವ ಬುಡಕಟ್ಟು ಜನಾಂಗದವರ ಜೀವನ ಪರಿಸ್ಥಿತಿ ಸುಧಾರಿಸಲು ಹಲವಾರು ಯೋಜನೆಗಳ ಜೊತೆಗೆ 3 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ, ಹಾಲು - ಸಹಕಾರಿ ಸಂಘಗಳಿಗೆ ಲೀಟರ್‌ಗೆ ರೂ. 5 ಸಬ್ಸಿಡಿಯ ಭರವಸೆ ನೀಡಬಹುದು ಎನ್ನಲಾಗಿದೆ.

ಹಾಗೆಯೇ ಆರೋಗ್ಯ ರಕ್ಷಣೆಯಲ್ಲಿ, ಪ್ರಣಾಳಿಕೆಯು ಕೋವಿಡ್ ಸಂತ್ರಸ್ತರ 3 ಲಕ್ಷ ಕುಟುಂಬಗಳಿಗೆ ರೂ 10 ಲಕ್ಷದವರೆಗೆ ಉಚಿತ ಚಿಕಿತ್ಸೆ ಮತ್ತು ರೂ 4 ಲಕ್ಷದ ಸಹಾಯದ ಭರವಸೆ ನೀಡಬಹುದು ಎಂದು ಪಕ್ಷ ಮೂಲಗಳು ತಿಳಿಸಿವೆ.

ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳ ಬಿಡುಗಡೆಗೆ ಅಸಮಾಧಾನ:ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳ "ಅಸಂವಿಧಾನಿಕ" ಬಿಡುಗಡೆ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. 2002 ರ ಗಲಭೆಯಲ್ಲಿ ಆಕೆಯ ಕುಟುಂಬದ ಏಳು ಸದಸ್ಯರ ಹತ್ಯೆ ಮತ್ತು ಇತ್ತೀಚಿನ ಮೋರ್ಬಿ ಸೇತುವೆಯ ಕುಸಿತದ ಬಗ್ಗೆ ಕಾಂಗ್ರೆಸ್ ಉನ್ನತ ನಾಯಕತ್ವವು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಸೇತುವೆ ದುರಸ್ತಿಯಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದ ಮೊರ್ಬಿ ದುರ್ಘಟನೆ ನಡೆದಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ವಾಸ್ತವವಾಗಿ, ರಾಜ್ಯವು ಹಲವಾರು ಸಾಮಾಜಿಕ ಕಲ್ಯಾಣ ಸೂಚಕಗಳಲ್ಲಿ ಹಿಂದುಳಿದಿದೆ ಎಂದು ಗುಜರಾತ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅಮಿತ್ ಚಾವ್ಡಾ ಗಂಭೀರ ಆರೋಪ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ 15 ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್​

ABOUT THE AUTHOR

...view details