ಖಾಂಡ್ವಾ (ಮಧ್ಯಪ್ರದೇಶ): ದೀಪಾವಳಿ ಹಬ್ಬಕ್ಕೆ ಎಂದು ಸಂಬಂಧಿಕರ ಮನೆಗೆ ಬಂದಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. ಕೃತ್ಯದ ನಡೆದ 16 ಗಂಟೆಗಳ ಬಳಿಕ ಸಂತ್ರಸ್ತೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಇಲ್ಲಿನ ಕಂಕಾರಿಯಾ ಗ್ರಾಮದ ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿಯು ಜಸ್ವಾಡಿಯಲ್ಲಿರುವ ತನ್ನ ತಂದೆಯ ಚಿಕ್ಕಪ್ಪನ ಮನೆಗೆ ದೀಪಾವಳಿ ಹಬ್ಬಕ್ಕೆಂದು ಬಂದಿದ್ದಳು. ಆದರೆ, ಢಾಬಾದಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ವ್ಯಕ್ತಿಯ ಭಾನುವಾರ ರಾತ್ರಿ ಮಲಗಿದ್ದ ಬಾಲಕಿಯನ್ನು ಅಪಹರಿಸಿ, ಕಬ್ಬಿನ ಗದ್ದೆಯಲ್ಲಿ ಆಕೆ ಮೇಲೆ ದುಷ್ಕೃತ್ಯ ಎಸಗಿದ್ದಾನೆ.