ಹೈದರಾಬಾದ್, ತೆಲಂಗಾಣ:ಭೋಪಾಲ್ - ಹೈದರಾಬಾದ್‌ನಲ್ಲಿ ಬೇಸ್ (ಮಾಡ್ಯೂಲ್) ಆಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆ ಹಿಜ್ಬ್ ಉತ್ ತಹ್ರೀರ್ (ಹಟ್) ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೊಹಮ್ಮದ್ ಸಲ್ಮಾನ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬಂಧಿಸಿದೆ. ಹೈದರಾಬಾದ್‌ನ ರಾಜೇಂದ್ರನಗರದಲ್ಲಿ ಆರೋಪಿಯನ್ನು ಬಂಧಿಸಿರುವ ಎನ್‌ಐಎ, ಆತನ ಎರಡು ನಿವಾಸಗಳಿಂದ ಡಿಜಿಟಲ್ ಸಾಧನಗಳಾದ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಮತ್ತು ಎಸ್‌ಡಿ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದೆ.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿತರ ಸಂಖ್ಯೆ 17ಕ್ಕೆ ತಲುಪಿದೆ. ಸಲ್ಮಾನ್ ಹಟ್‌ನ ಹೈದರಾಬಾದ್ ವಿಭಾಗದ ಪ್ರಮುಖ ಸದಸ್ಯ ಎಂದು NIA ಪತ್ತೆ ಮಾಡಿದೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಸಲೀಂ ಎಂಬಾತನಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಆತನನ್ನು ಬೇಟೆಯಾಡಿ ಹಿಡಿಯಲಾಗಿದೆಯಂತೆ.
ಕಳೆದ ವರ್ಷ ಮೇ 9 ರಂದು ಹಟ್ ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳನ್ನು ಭೋಪಾಲ್ ಪೊಲೀಸರು ಮೊದಲು ಪತ್ತೆ ಹಚ್ಚಿದ್ದರು. ಮೇ 24 ರಂದು ಭೋಪಾಲ್, ಛಿಂದ್ವಾರಾ ಮತ್ತು ಹೈದರಾಬಾದ್‌ನಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿತ್ತು ಮತ್ತು 16 ಜನರನ್ನು ಬಂಧಿಸಲಾಯಿತು. ಆ ವೇಳೆ, ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ವಿಚಲಿತ ಸಂಗತಿಗಳು ಬೆಳಕಿಗೆ ಬಂದಿವು.
ಟೈಲರ್, ಆಟೋ ಚಾಲಕರು, ಜಿಮ್ ತರಬೇತುದಾರರು, ಕಂಪ್ಯೂಟರ್ ಆಪರೇಟರ್‌ಗಳಾಗಿ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವಾಗ ಗುಪ್ತ ಸಭೆಗಳ ಮೂಲಕ ಭಯೋತ್ಪಾದಕ ದಾಳಿ ನಡೆಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇವರೆಲ್ಲ ನಗರಗಳ ಸಮೀಪದ ಅರಣ್ಯಗಳಲ್ಲಿ ಆಯುಧ ಸ್ಫೋಟಿಸುವ ತರಬೇತಿ ಪಡೆದಿರುವುದು ಬೆಳಕಿಗೆ ಬಂದಿದ್ದು, ಹೈದರಾಬಾದ್ ಘಟಕದ ಸದಸ್ಯರು ಇದಕ್ಕೆ ಕೇಂದ್ರವಾಗಿ ವಿಕಾರಾಬಾದ್ ಜಿಲ್ಲೆಯ ಅನಂತಗಿರಿ ಅರಣ್ಯವನ್ನು ಆಯ್ಕೆ ಮಾಡಿಕೊಂಡಿದ್ದರು ಎಂಬುದು ತನಿಖೆ ಮೂಲಕ ತಿಳಿದು ಬಂದಿತ್ತು.