ಲಖನೌ(ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಎರಡನೇ ಅವಧಿಗೆ ನೂತನ ಸರ್ಕಾರಿ ಅಧಿಕಾರಕ್ಕೆ ಬಂದಿದ್ದು, ಇಂದು ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಉತ್ತರಾಖಂಡದ ಮಾಜಿ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಸೇರಿದಂತೆ 52 ಶಾಸಕರು ಪದಗ್ರಹಣ ಮಾಡಿದ್ದಾರೆ. ಇದರಲ್ಲಿ ಶೇ. 63ರಷ್ಟು ಹೊಸ ಮುಖಗಳಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
2024ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ 2.0 ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಹೊಸ ಪ್ರತಿಭೆಗಳಿಗೆ ಮಣೆ ಹಾಕಲಾಗಿದೆ. ಒಟ್ಟು 24 ಹಾಲಿ ಸಚಿವರಿಗೆ ಕೊಕ್ ನೀಡಲಾಗಿದೆ. ಇಂದು ಹೊಸದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ 52 ಮಂತ್ರಿಗಳ ಪೈಕಿ 33 ಹೊಸಬರು ಇದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಕೇಶವ್ ಪ್ರಸಾದ್ ಮೌರ್ಯಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇವರ ಜೊತೆಗೆ ಬ್ರಿಜೇಶ್ ಪಾಟಕ್ ಡೆಪ್ಯುಟಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಸಚಿವ ಸಂಪುಟ ಸೇರಿದವರ ಹೆಸರು ಯೋಗಿ ಕ್ಯಾಬಿನೆಟ್ 2.0: ಇಬ್ಬರು ಉಪಮುಖ್ಯಮಂತ್ರಿಗಳು, 16 ಕ್ಯಾಬಿನೆಟ್ ದರ್ಜೆಯ ಸಚಿವರು, 14 ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರು ಮತ್ತು 20 ರಾಜ್ಯ ಸಚಿವರು ಸಂಪುಟ ಸೇರಿದ್ದಾರೆ. ಸಚಿವರಾಗಿ ಸೂರ್ಯ ಪ್ರತಾಪ್ ಶಾಹಿ, ಸುರೇಶ್ ಕುಮಾರ್ ಖನ್ನಾ, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಉತ್ತರಾಖಂಡ ಮಾಜಿ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ, ಲಕ್ಷ್ಮೀ ನಾರಾಯಣ ಚೌಧರಿ, ಜೈವೀರ್ ಸಿಂಗ್, ಧರಂಪಾಲ್ ಸಿಂಗ್, ನಂದ ಗೋಪಾಲ್ ಗುಪ್ತಾ, ಭೂಪೇಂದ್ರ ಸಿಂಗ್ ಚೌಧರಿ, ಅನಿಲ್ ರಾಜ್‌ಭರ್ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಜಿತಿನ್ ಪ್ರಸಾದ್, ರಾಕೇಶ್ ಸಚನ್, ಅರವಿಂದ್ ಕುಮಾರ್ ಶರ್ಮಾ, ಯೋಗೇಂದ್ರ ಉಪಾಧ್ಯಾಯ, ಆಶಿಶ್ ಪಟೇಲ್ ಮತ್ತು ಸಂಜಯ್ ನಿಶಾದ್ ಕೂಡ ಅವಕಾಶ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:37 ವರ್ಷದ ನಂತರ ಸತತ 2ನೇ ಅವಧಿಗೆ ಯುಪಿ ಸಿಎಂ ಆಗಿ ಯೋಗಿ ಆದಿತ್ಯನಾಥ್ ಐತಿಹಾಸಿಕ ಪದಗ್ರಹಣ
ರಾಜ್ಯ ಸಚಿವರಾಗಿ ನಿತಿನ್ ಅಗರ್ವಾಲ್, ಕಪಿಲ್ ದೇವ್ ಅಗರ್ವಾಲ್, ರವೀಂದ್ರ ಜೈಸ್ವಾಲ್, ಸಂದೀಪ್ ಸಿಂಗ್, ಗುಲಾಬ್ ದೇವಿ, ಗಿರೀಶ್ ಚಂದ್ರ ಯಾದವ್, ಧರಂವೀರ್ ಪ್ರಜಾಪತಿ , ಅಸೀಮ್ ಅರುಣ್, ಜೆಪಿಎಸ್ ರಾಥೋಡ್, ದಯಾಶಂಕರ್ ಸಿಂಗ್, ನರೇಂದ್ರ ಕಶ್ಯಪ್, ದಿನೇಶ್ ಪ್ರತಾಪ್ ಸಿಂಗ್, ಅರುಣ್ ಕುಮಾರ್ ಸಕ್ಸೇನಾ, ದಯಾಶಂಕರ್ ಮಿಶ್ರಾ ದಯಾಲು ಯೋಗಿ ಕ್ಯಾಬಿನೆಟ್ ಸೇರಿದ್ದಾರೆ. ಅದೇ ರೀತಿ, ಮಾಯಾಂಕೇಶ್ವರ್ ಸಿಂಗ್, ದಿನೇಶ್ ಖಾಟಿಕ್, ಸಂಜೀವ್ ಗೊಂಡ್, ಬಲದೇವ್ ಸಿಂಗ್ ಔಲಾಖ್, ಅಜಿತ್ ಪಾಲ್, ಜಸ್ವಂತ್ ಸೈನಿ, ರಾಮಕೇಶ್ ನಿಶಾದ್, ಮನೋಹರ್ ಲಾಲ್ ಕೋರಿ ಅಲಿಯಾಸ್ ಮನ್ನು ಕೋರಿ, ಸಂಜಯ್ ಗಂಗ್ವಾರ್, ಬ್ರಜೇಶ್ ಸಿಂಗ್, ಕೆಪಿ ಮಲಿಕ್, ಸುರೇಶ್ ರಾಹಿ ಅವರು ರಾಜ್ಯ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ.
ಯಾರಿಗೆಲ್ಲ ಕೊಕ್:ಉಪಮುಖ್ಯಮಂತ್ರಿ ದಿನೇಶ್ ಶರ್ಮಾ, ಸಚಿವರಾದ ಸತೀಶ್ ಮಹಾನಾ, ಶ್ರೀಕಾಂತ್ ಶರ್ಮಾ, ಸಿದ್ಧಾರ್ಥ್ ನಾಥ್ ಸಿಂಗ್, ರಾಮ್ ನರೇಶ್ ಅಗ್ನಿಹೋತ್ರಿ, ಮೊಹ್ಸಿನ್ ರಜಾ, ರಮಾಪತಿ ಶಾಸ್ತ್ರಿ, ನೀಲಕಂಠ ತಿವಾರಿ, ಅತುಲ್ ಗರ್ಗ್, ಅಶುತೋಷ್ ಟಂಡನ್, ಜೈ ಪ್ರತಾಪ್ ಸಿಂಗ್, ಅಶೋಕ್ ಕಟಾರಿಯಾ, ಡಾ. ಮಹೇಂದ್ರ ಸಿಂಗ್, ಶ್ರೀರಾಮ್ ಚೌಹಾಣ್, ಜೈ ಕುಮಾರ್ ಜಾಕಿ, ಅನಿಲ್ ಶರ್ಮಾ, ಸುರೇಶ್ ಪಾಸಿ, ಚೌಧರಿ ಉದಯ್ ಭಾನ್ ಸಿಂಗ್, ರಾಮಶಂಕರ್ ಸಿಂಗ್ ಪಟೇಲ್, ನೀಲಿಮಾ ಕಟಿಯಾರ್, ಮಹೇಶ್ ಗುಪ್ತಾ, ಜಿಎಸ್ ಧರ್ಮೇಶ್ ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ.