ಕೇರಳ (ತಿರುವನಂತಪುರಂ): ಓಣಂನ ಉತ್ರಾಂ ದಿನದಂದು (ತಿರುವೋಣಂ ಮುಂಚಿನ ದಿನ, ವಿಶೇಷ ದಿನ) ಮದ್ಯ ಮಾರಾಟದಲ್ಲಿ ಕೇರಳ ದಾಖಲೆಯ ಮಾರಾಟ ಕಂಡಿದೆ. ಬಿವರೇಜಸ್ ಕಾರ್ಪೊರೇಷನ್ (ಬೆವ್ಕೊ) ಮತ್ತು ಕನ್ಸ್ಯೂಮರ್‌ಫೆಡ್‌ನ ಔಟ್‌ಲೆಟ್‌ಗಳ ಮೂಲಕ 117 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಪೂರಡಂ ದಿನದಂದು ಬೆವ್ಕೋ 104 ಕೋಟಿ ರೂ.ಗಳ ಮದ್ಯ ಮಾರಾಟ ಮಾಡಿದೆ.
ಒಂದು ದಿನದ ಮದ್ಯ ಮಾರಾಟ 100 ಕೋಟಿ ದಾಟಿರುವುದು ಬೆವ್ಕೋ ಇತಿಹಾಸದಲ್ಲಿ ಇದೇ ಮೊದಲು. ಕಳೆದ ವರ್ಷ ಪೂರಾಡಂ ದಿನದಂದು 78 ಕೋಟಿ ರೂ. ಉತ್ರಾಂ ದಿನ 85 ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬಂಪರ್ ಮದ್ಯ ಮಾರಾಟವಾಗಿದೆ.
ಓಣಂ ಹಬ್ಬದ ಒಂದೇ ವಾರದಲ್ಲಿ ಇಡೀ ರಾಜ್ಯದಲ್ಲಿ 625 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ. ಇದು ರಾಜ್ಯದ ಇತಿಹಾಸದಲ್ಲಿಯೂ ದಾಖಲೆಯಾಗಿದೆ. ಬೆವ್ಕೊದ ಶೇ. 85 ರಷ್ಟು ಮಾರಾಟವನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡಿರುವುದು ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ದೊಡ್ಡ ಪರಿಹಾರವಾಗಿದೆ.