ಕರ್ನಾಟಕ

karnataka

ETV Bharat / bharat

Women empowerment : ಕೇರಳದಲ್ಲಿ 8 ಜಿಲ್ಲೆಗಳಿಗೆ ಮಹಿಳಾ ಜಿಲ್ಲಾಧಿಕಾರಿಗಳ ನೇಮಕ! - ಮಹಿಳಾ ಜಿಲ್ಲಾಧಿಕಾರಿ

ಕೇರಳದ 14 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಿಗೆ ಮಹಿಳಾ ಜಿಲ್ಲಾಧಿಕಾರಿಗಳನ್ನು ನೇಮಿಸುವ ಮೂಲಕ ಅಲ್ಲಿನ ಸರ್ಕಾರ ಹೊಸ ಇತಿಹಾಸ ಸೃಷ್ಟಿಸಿದೆ..

ಕೇರಳದಲ್ಲಿ 8 ಜಿಲ್ಲೆಗಳಿಗೆ ಮಹಿಳಾ ಜಿಲ್ಲಾಧಿಕಾರಿಗಳ ನೇಮಕ!
ಕೇರಳದಲ್ಲಿ 8 ಜಿಲ್ಲೆಗಳಿಗೆ ಮಹಿಳಾ ಜಿಲ್ಲಾಧಿಕಾರಿಗಳ ನೇಮಕ!

By

Published : Jul 9, 2021, 12:06 PM IST

ತಿರುವನಂತಪುರಂ(ಕೇರಳ) :ರಾಜ್ಯದ ಪ್ರಮುಖ ಹುದ್ದೆಗಳಿಗೆ ಮಹಿಳಾಮಣಿಗಳನ್ನು ನೇಮಿಸುವ ಮೂಲಕ ಕೇರಳ ಸರ್ಕಾರ ಹೊಸ ಇತಿಹಾಸ ಸೃಷ್ಟಿಸಿದೆ. ರಾಜ್ಯದ 14 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಿಗೆ ಮಹಿಳಾ ಜಿಲ್ಲಾಧಿಕಾರಿಗಳಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯವು ಅತಿ ಹೆಚ್ಚು ಮಹಿಳಾಧಿಕಾರಿಗಳನ್ನು ಹೊಂದಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮೊದಲಿಗೆ ಮಹಿಳಾ ಜಿಲ್ಲಾಧಿಕಾರಿ ನೇಮಕವಾದರು.

ಮಹಿಳಾ ಜಿಲ್ಲಾಧಿಕಾರಿಗಳ ಪಟ್ಟಿ

ತಿರುವನಂತಪುರಂ ಡಾ.ನವಜೋತ್ ಖೋಸಾ
ಪಥನಮತ್ತಟ್ಟ ಡಾ.ದಿವ್ಯಾ ಎಸ್ ಅಯ್ಯರ್
ಕೊಟ್ಟಾಯಂ ಡಾ.ಪಿ.ಕೆ.ಜಯಶ್ರೀ
ಇಡುಕ್ಕಿ ಶೀಬಾ ಜಾರ್ಜ್
ತ್ರಿಶೂರ್ ಹರಿತಾ ವಿ.ಕುಮಾರ್
ಪಾಲಕ್ಕಾಡ್ ಮೃನ್ಮಾಯಿ ಜೋಶಿ
ವಯನಾಡು ಡಾ.ಅಧೀಲಾ ಅಬ್ದುಲ್ಲಾ
ಕಾಸರಗೋಡು ಭಂಡಾರಿ ಸ್ವಾಗತ್ ರಣವೀರ್‌ಚಂದ್

ಇಷ್ಟು ಜನರಲ್ಲಿ ನವಜೋತ್ ಖೋಸಾ, ದಿವ್ಯಾ ಅಯ್ಯರ್ ಮತ್ತು ಅಧೀಲಾ ಅಬ್ದುಲ್ಲಾ ವೈದ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ABOUT THE AUTHOR

...view details