ಕಣ್ಣೂರು (ಕೇರಳ): ತಮಿಳುನಾಡಿನ ಪಳನಿಯಲ್ಲಿ ಕೇರಳದ ತಲಶೇರಿ ಮೂಲದ 40 ವರ್ಷದ ಮಹಿಳೆಯನ್ನು ಅಪರಿಚಿತ ಪುರುಷರ ಗುಂಪು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದೆ. ಈ ಘಟನೆ ಜೂನ್ 19 ರಂದು ನಡೆದಿದ್ದು, ಗಂಭೀರ ಗಾಯಗೊಂಡ ಮಹಿಳೆ ಪ್ರಸ್ತುತ ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಂಪತಿಗಳು ಪಾಲಕ್ಕಾಡ್‌ನಿಂದ ರೈಲಿನಲ್ಲಿ ಪಳನಿಗೆ ತೆರಳುತ್ತಿದ್ದಾಗ ಮೂವರು ಪುರುಷರು ಮಹಿಳೆಯನ್ನು ಅಪಹರಿಸಿ, ಹತ್ತಿರದ ಲಾಡ್ಜ್‌ಗೆ ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಪರಾಧಿಗಳು ಬಿಯರ್ ಬಾಟಲಿಯ ಚೂರಿನಿಂದ ಆಕೆಯ ಖಾಸಗಿ ಭಾಗಗಳಿಗೆ ಗಾಯಗೊಳಿಸಿದ್ದಾರೆ. ಪತ್ನಿಯ ಮೇಲಿನ ಈ ಕ್ರೌರ್ಯವನ್ನು ತಡೆಯಲು ಪ್ರಯತ್ನಿಸಿದ ಪತಿಯ ಮೇಲೆಯೂ ನೀಚರು ಹಲ್ಲೆ ನಡೆಸಿದ್ದಾರೆ.
ದಂಪತಿಗಳು ಲಾಡ್ಜ್ನಿಂದ ತಪ್ಪಿಸಿಕೊಂಡು ಬಂದು ಸಹಾಯಕ್ಕಾಗಿ ಮನವಿ ಮಾಡಿದರೂ ಪಳನಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಲಾಗಿದೆ. ಘಟನೆಯ ಬಳಿಕ ದಂಪತಿಗಳು ಕೇರಳಕ್ಕೆ ಮರಳಿದರು. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಗೆ ತಲಶೇರಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಕಲಿಸಲಾಯಿತು. ನಂತರ ಪರಿಯಾರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.
ಘಟನೆಯ ಬಗ್ಗೆ ಡಿಜಿಪಿಗೆ ದೂರು ಬಂದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಣ್ಣೂರು ನಗರ ಪೊಲೀಸ್ ಆಯುಕ್ತ ಆರ್.ಇಲಾಂಕೊ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ ನಂತರ ವರದಿಯನ್ನು ತಮಿಳುನಾಡು ಪೊಲೀಸರಿಗೆ ಹಸ್ತಾಂತರಿಸಲಾಗುವುದು.
ಓದಿ:ಮೊಬೈಲ್ನಲ್ಲೇ ಮುಳುಗಿರ್ತಿದ್ಲು 'ಟಿಕ್ಟಾಕ್ ಸ್ಟಾರ್': ಪತ್ನಿ ವರ್ತನೆಗೆ ಬೇಸತ್ತು ಪತಿ ಆತ್ಮಹತ್ಯೆ