ತ್ರಿಶೂರ್ (ಕೇರಳ): ಕೇರಳದ ತ್ರಿಶೂರ್ ಜಿಲ್ಲೆಯ ಕೂರ್ಕಂಚೇರಿಯ ಅವಳಿ ಸಹೋದರಿಯರಾದ ಅನ್ಲಿಟ್ ಮತ್ತು ಆನ್ಲಿನ್ ಅವರಿಗೆ ಬ್ರಿಟನ್‌ನ ಬಕಿಂಗ್ಹ್ಯಾಮ್ ಅರಮನೆಯಿಂದ ಪತ್ರ ಬಂದಿದೆ.
ಇರಿಂಜಲಕುಡಾದ ಕ್ರೈಸ್ಟ್ ವಿದ್ಯಾನಿಕೇಥನ್ ಶಾಲೆಯಲ್ಲಿ 6 ನೇ ತರಗತಿ ಓದುತ್ತಿರುವ ಇವರು ಮಾರ್ಚ್ 8ರಂದು 2ನೇ ರಾಣಿ ಎಲಿಜಬೆತ್ಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ "ದೇವರ ಸ್ವಂತ ನಾಡು"ವಿಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಅಷ್ಟೇ ಅಲ್ಲದೆ, ತಾವು ಲಂಡನ್ಗೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಇನ್ನು ಪತ್ರದ ಜೊತೆಗೆ, ತ್ರಿಶೂರ್ ಪೂರಂ ಮತ್ತು ಅಲಪ್ಪುಳ ಹಿನ್ನೀರಿನ ವರ್ಣಚಿತ್ರಗಳನ್ನು ಲಗತ್ತಿಸಿದ್ದರು.
ಬ್ರಿಟನ್ ರಾಣಿಯಿಂದ ಬಂದ ಪತ್ರ ಇದೀಗ ಬ್ರಿಟಿಷ್ ರಾಜನಿಂದ ವಿಂಡ್ಸರ್ ಕ್ಯಾಸಲ್ ಲೆಟರ್ ಹೆಡ್ ಅನ್ನು ಒಳಗೊಂಡಿರುವ ರಾಯಲ್ ಪೋಸ್ಟ್ ಅವಳಿ ಸಹೋದರಿಯರ ಕೈ ಸೇರಿದ್ದು, ಸಂತೋಷಕ್ಕೆ ಕಾರಣವಾಗಿದೆ.
ರಾಣಿ ಎಲಿಜಬೆತ್ II ಅವರು ಪತ್ರದಲ್ಲಿ ಹೀಗೆ ಬರೆದಿದ್ದಾರೆ. "ಅಂದವಾಗಿ ಬರೆದ ಪತ್ರಗಳು ಮತ್ತು ಭವ್ಯವಾದ ಚಿತ್ರಗಳಿಗಾಗಿ ಎರಡೂ ಮಕ್ಕಳಿಗೆ ಧನ್ಯವಾದಗಳು. ನೀವು ಕೇಳಿದಂತೆ ಮಾಡಲು ಸಾಧ್ಯವಾಗದಿದ್ದರೂ, ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀವು ಸುರಕ್ಷಿತವಾಗಿರುತ್ತೀರಿ ಎಂದು ಭಾವಿಸುತ್ತೇನೆ. 2021 ನಮ್ಮೆಲ್ಲರಿಗೂ ಸಂತೋಷದ ವರ್ಷವಾಗಲಿದೆ" ಎಂದು ರಾಣಿ ಆಶಿಸಿದ್ದಾರೆ.
ಆನ್ಲಿನ್ ಮತ್ತು ಅನ್ಲಿಟ್, ತ್ರಿಶೂರ್‌ನ ಕೂರ್ಕಾಂಚೇರಿಯ ಕಾಕ್ಕಸೇರಿಯ ಸಂತೋಷ್ ಮತ್ತು ಮೆಲ್ಫಿಯ ಮಕ್ಕಳು. ಇಬ್ಬರೂ ಮಕ್ಕಳು ತಾವು ಬಿಡಿಸಿದ ರೇಖಾಚಿತ್ರಗಳು ಮತ್ತು ವರ್ಣಚಿತ್ರಗಳಿಗಾಗಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ.