ತಿರುವನಂತಪುರಂ:ಮಂಗಳ ಮುಖಿಯರ ಮೇಲಿನ ದೂರುಗಳನ್ನು ಪರಿಹರಿಸಲು ಯಾವುದೇ ರೀತಿಯಲ್ಲಿ ವಿಳಂಬ ಮಾಡಬಾರದು ಎಂದು ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಸೂಚಿಸಿದ್ದಾರೆ.
ತೃತೀಯ ಲಿಂಗಿಗಳು ದೂರು ನೀಡುವಾಗ ಪೊಲೀಸ್ ಸಿಬ್ಬಂದಿ ತಪ್ಪು ನಡವಳಿಕೆ ತೋರಿದರೆ ಅಂಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ಜಿಲ್ಲೆಯ ಪೊಲೀಸ್ ಮುಖ್ಯಸ್ಥರಿಗೆ ಲೋಕನಾಥ್ ಬೆಹೆರಾ ಸೂಚಿಸಿದ್ದಾರೆ. ತೃತೀಯ ಲಿಂಗಿಗಳಿಂದ ದೂರು ದಾಖಲಾದಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕೆಲವು ಬಾರಿ ಅವರಿಗೆ ನ್ಯಾಯ ದೊರಕುವುದಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕನಾಥ್ ಬೆಹೆರಾ ಈ ಸೂಚನೆ ನೀಡಿದ್ದಾರೆ.