ತಿರುವನಂತಪುರಂ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಕೇರಳದ ಅಷ್ಟೂ ಮತಗಳು ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಚಲಾವಣೆಯಾಗಲಿವೆ. ರಾಜ್ಯವೊಂದರ ಎಲ್ಲ ಮತಗಳು ಪ್ರತಿಪಕ್ಷದ ಅಭ್ಯರ್ಥಿಗೆ ಚಲಾವಣೆಯಾಗಲಿರುವ ಏಕೈಕ ರಾಜ್ಯ ಕೇರಳವಾಗಲಿದೆ.
ಕೇರಳದಲ್ಲಿ ಬಿಜೆಪಿ ಅಥವಾ ಅದರ ಮಿತ್ರ ಪಕ್ಷದ ಯಾವುದೇ ಶಾಸಕರು ಅಥವಾ ಸಂಸದರಿಲ್ಲ. ಹಾಗಾಗಿ, ಎಲ್ಡಿಎಫ್ ಹಾಗೂ ಯುಡಿಎಫ್ನ ಎಲ್ಲ ಮತಗಳು ಯಶವಂತ್ ಸಿನ್ಹಾ ಪರವಾಗಿ ಚಲಾವಣೆಯಾಗಲಿದ್ದು, ದ್ರೌಪದಿ ಮುರ್ಮು ಅವರಿಗೆ ಒಂದೇ ಒಂದು ಮತ ಇಲ್ಲಿಂದ ಸಿಗುವ ಸಾಧ್ಯತೆಗಳಿಲ್ಲ.