ಕರ್ನಾಟಕ

karnataka

ETV Bharat / bharat

ಅಸ್ಸೋಂನ ಐಐಟಿಯಲ್ಲಿ ಕೇರಳ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು.. ಕಾರಣ ನಿಗೂಢ - ಕೇರಳದ ಸುರ್ಜ್ಯ ನಾರಾಯಣ ಪ್ರೇಮ್ ಕಿಶೋರ್ ಮೃತ

ಅಸ್ಸೋಂನ ಗುವಾಹಟಿಯ ಐಐಟಿಯಲ್ಲಿ ಕೇರಳ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

Kerala student commits suicide  student commits suicide in IIT Guwahati  student commits suicide in assam  ಅಸ್ಸೋಂನ ಐಐಟಿಯಲ್ಲಿ ಕೇರಳ ವಿದ್ಯಾರ್ಥಿ ಆತ್ಮಹತ್ಯೆ  ಕೇರಳ ವಿದ್ಯಾರ್ಥಿ ಆತ್ಮಹತ್ಯೆ  ಕೇರಳದ ಸುರ್ಜ್ಯ ನಾರಾಯಣ ಪ್ರೇಮ್ ಕಿಶೋರ್ ಮೃತ  ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆ
ಕೇರಳ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

By

Published : Sep 17, 2022, 2:28 PM IST

ಗುವಾಹಟಿ, ಅಸ್ಸೋಂ: ಗುವಾಹಟಿಯ ಐಐಟಿಯ ವಿದ್ಯಾರ್ಥಿಯೊಬ್ಬ ನಿನ್ನೆ ರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇರಳದ ಸುರ್ಜ್ಯ ನಾರಾಯಣ ಪ್ರೇಮ್ ಕಿಶೋರ್ ಮೃತ ಯುವಕ ಎಂದು ಗುರುತಿಸಲಾಗಿದೆ. ಪ್ರೇಮ್​ ಕಿಶೋರ್​ ಬಿಟೆಕ್ (ವಿನ್ಯಾಸ) ಮತ್ತು ಸಂಸ್ಥೆಯ ಉಮಿಯಂ ಹಾಸ್ಟೆಲ್‌ನ ಗಡಿಭಾಗದ ವಿದ್ಯಾರ್ಥಿಯಾಗಿದ್ದರು.

ಉತ್ತರ ಗುವಾಹಟಿ ಪೊಲೀಸರು ಸುರ್ಜ್ಯ ನಾರಾಯಣ ಪ್ರೇಮ್ ಕಿಶೋರ್ ಅವರ ಮೃತದೇಹವನ್ನು ಹಾಸ್ಟೆಲ್ ಕೊಠಡಿಯಿಂದ ವಶಪಡಿಸಿಕೊಂಡರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತನ ಬಳಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಆತ್ಮಹತ್ಯೆ ತನಿಖೆ ಆರಂಭಿಸಿರುವ ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ:ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ.. ಕಾರಣ?


ABOUT THE AUTHOR

...view details