ತಿರುವನಂತಪುರಂ:ದೇಶದಲ್ಲಿ ಮೊದಲಕೋವಿಡ್ ಕೇಸ್ ಪತ್ತೆಯಾದ ದೇವರ ನಾಡು ಕೇರಳದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿತ್ತು. ಭಾನುವಾರ ಮತ ಎಣಿಕೆ ಮಾಡಲು ಅಧಿಕಾರಿಗಳು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಮತ ಎಣಿಕೆ ಶುರುವಾಗಲಿದೆ.
ಒಂದು ಬಾರಿಗೆ ಒಂದೇ ಪಕ್ಷಕ್ಕೆ ಅಧಿಕಾರ ಕೊಡುವ ಕೇರಳಿಗರು
ಬಹುತೇಕ ಸಮೀಕ್ಷೆಗಳು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ಎಲ್‌ಡಿಎಫ್ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿವೆ. ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ತನ್ನ ಆಶಾವಾದ ಬಿಟ್ಟುಕೊಟ್ಟಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾದ 77 ವರ್ಷದ ಕಾಂಗ್ರೆಸ್ನ ಉಮ್ಮನ್ ಚಾಂಡಿ ಅವರು ಪ್ರತಿ ಚುನಾವಣೆಯಂತೆ ಕೇರಳದ ಚುನಾವಣಾ ಇತಿಹಾಸವು ಹಾಗೆಯೇ ಉಳಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇರಳಿಗರು ಒಂದು ಬಾರಿ ಒಂದೇ ಪಕ್ಷಕ್ಕೆ ಅಧಿಕಾರ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಅದೇ ಸೂತ್ರ ಮುಂದುವರಿಯಲಿದೆ ಎಂಬುದು ಪ್ರತಿಪಕ್ಷಗಳ ನಿರೀಕ್ಷೆ.