ಎರ್ನಾಕುಲಂ(ಕೇರಳ) :ಕೊಚ್ಚಿಯ ಮಾಲ್‌ನಲ್ಲಿ ಶಾಪಿಂಗ್ ಮಾಡುವಾಗ ಇಬ್ಬರು ಯುವಕರು ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಕೇರಳದ ನಟಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದೀಗ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಆರೋಪಿಗಳನ್ನು ಗುರುತಿಸಿದ್ದಾರೆ.
ಸಿಸಿಟಿವಿ ದೃಶ್ಯದಲ್ಲಿ ಸೆರೆಯಾದ ಆರೋಪಿಗಳ ಚಿತ್ರ ಇಬ್ಬರು ಸುಮಾರು 25 ವರ್ಷದ ಯುವಕರು ಮಾಲ್ಗೆ ಆಗಮಿಸಿದ್ದಾರೆ. ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಹೆಸರು ಮತ್ತು ವಿವರವನ್ನು ನೀಡದೆ ಅಲ್ಲಿಂದ ತಪ್ಪಿಸಿಕೊಂಡಿದ್ದು, ಬಳಿಕ ಮೆಟ್ರೋ ರೈಲಿನ ಮೂಲಕ ಎರ್ನಾಕುಲಂನ ದಕ್ಷಿಣಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಓದಿ:ಕೊಚ್ಚಿ ಶಾಪಿಂಗ್ ಮಾಲ್‌ನಲ್ಲಿ ನಡೆದ ‘ಆ ಕರಾಳ ಘಟನೆ’ ಬಗ್ಗೆ ಹಂಚಿಕೊಂಡ ಕೇರಳ ನಟಿ
ಈ ಸಿಸಿಟಿವಿ ದೃಶ್ಯಗಳನ್ನು ನಟಿಗೆ ತೋರಿಸಿದ ಬಳಿಕ ಆರೋಪಿಗಳ ಸ್ಪಷ್ಟನೆ ಸಿಗಲಿದೆ. ಪೊಲೀಸರು ಶುಕ್ರವಾರ ನಟಿಯ ತಾಯಿಯೊಂದಿಗೆ ಮಾತನಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ತನಗಾದ ಕೆಟ್ಟ ಅನುಭವದ ಬಗ್ಗೆ ಬರೆದುಕೊಂಡಿದ್ದರು. "ಇಬ್ಬರು ಯುವಕರು ನನ್ನನ್ನು ಹಿಂಬಾಲಿಸಿದರು. ದೇಹದ ವೈಯಕ್ತಿಕ ಭಾಗಗಳನ್ನು ಮುಟ್ಟಿದರು ಮತ್ತು ನನ್ನನ್ನು ಹಿಡಿದರು. ಈ ಅನಿರೀಕ್ಷಿತ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೆ. ನನಗೆ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ" ಎಂದು ಆಕೆ ಹೇಳಿದ್ದಾರೆ.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ಸುಮೋಟೋ ಪ್ರಕರಣವನ್ನು ದಾಖಲಿಸುವುದಾಗಿ ಕೇರಳ ಪೊಲೀಸರು ತಿಳಿಸಿದ್ದಾರೆ.