ಕರ್ನಾಟಕ

karnataka

ETV Bharat / bharat

ಹಣಕ್ಕಾಗಿ 'ಪತ್ನಿಯರ ವಿನಿಮಯ' ದಂಧೆ ಬೆಳಕಿಗೆ.. ಇದಕ್ಕಾಗಿ ಮೆಸೆಂಜರ್​, ಟೆಲಿಗ್ರಾಂ ಗ್ರೂಪ್​ ರಚನೆ

ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್​ನಲ್ಲಿ ಹಣ ಮತ್ತು ಲೈಂಗಿಕತೆಗಾಗಿ ಪತ್ನಿಯರ ವಿನಿಮಯ ಮಾಡಿಕೊಳ್ಳಲೆಂದೇ ಟೆಲಿಗ್ರಾಂ, ಮೆಸೆಂಜರ್ ಗ್ರೂಪ್​ ರಚನೆ ಮಾಡಿಕೊಂಡಿದ್ದಾರೆ. ಹಣಕ್ಕಾಗಿ ತಮ್ಮ ಹೆಂಡತಿಯರನ್ನು ಪರ ಪುರುಷರ ಜೊತೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ಪ್ರಕರಣ ಭೇದಿಸಿರುವ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.

kerala
ಪತ್ನಿಯರ ವಿನಿಮಯ

By

Published : Jan 10, 2022, 1:40 PM IST

ತಿರುವನಂತಪುರಂ(ಕೇರಳ):ಮಾಹಿತಿ ವಿನಿಮಯಕ್ಕಾಗಿ ಟೆಲಿಗ್ರಾಂ, ಮೆಸೆಂಜರ್​ ಗುಂಪುಗಳನ್ನು ರಚನೆ ಮಾಡಿಕೊಂಡಿದ್ದನ್ನು ನೋಡಿದ್ದೇವೆ. ಆದರೆ, ಕೇರಳದಲ್ಲಿ ಲೈಂಗಿಕತೆಗಾಗಿ 'ಪತ್ನಿಯರ ವಿನಿಮಯ' ಮಾಡಿಕೊಳ್ಳುವ ದಂಧೆ ನಡೆಸಲು ಗ್ರೂಪ್​ ರಚಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್​ನಲ್ಲಿ ಹಣ ಮತ್ತು ಲೈಂಗಿಕತೆಗಾಗಿ ಪತ್ನಿಯರ ವಿನಿಮಯ ಮಾಡಿಕೊಳ್ಳಲೆಂದೇ ಟೆಲಿಗ್ರಾಂ, ಮೆಸೆಂಜರ್ ಗ್ರೂಪ್​ ರಚನೆ ಮಾಡಿಕೊಂಡಿದ್ದಾರೆ. ಹಣಕ್ಕಾಗಿ ತಮ್ಮ ಹೆಂಡತಿಯರನ್ನು ಪರ ಪುರುಷರ ಜೊತೆ ವಿನಿಮಯ ಮಾಡಿಕೊಳ್ಳುತ್ತಿದ್ದರು.

ಈ ಗುಂಪುಗಳಲ್ಲಿ ಸಿರಿವಂತ ಕುಟುಂಬದವರೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಕೇರಳದ ಮೂರು ಜಿಲ್ಲೆಯ 1 ಸಾವಿರಕ್ಕೂ ಅಧಿಕ ಜನರು ಈ ಗುಂಪುಗಳ ಸದಸ್ಯರಾಗಿದ್ದಾರೆ. ಹಣ ಮತ್ತು ಲೈಂಗಿಕ ಸುಖಕ್ಕಾಗಿ ತಮ್ಮ ಪತ್ನಿಯನ್ನು ಬೇರೆ ಗಂಡಸರ ಜೊತೆ ವಿನಿಮಯ ಮಾಡಿಕೊಂಡಿದ್ದಾರೆ. ಮೂವರು ಗಂಡಸರ ಜೊತೆ ಒಬ್ಬ ಮಹಿಳೆಯನ್ನೂ ಹಂಚಿಕೊಂಡ ಬಗ್ಗೆಯೂ ಉದಾಹರಣೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಗುಂಪುಗಳ ಮೇಲೆ ತೀವ್ರ ನಿಗಾ ಇರಿಸಿದ್ದು, ಇವರು ಬೇರೆ ಗುಂಪುಗಳ ಜೊತೆ ಸಂಪರ್ಕ ಹೊಂದಿದ್ದಾರಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಈ ಗುಂಪುಗಳಲ್ಲಿ 25 ಜನರ ಮೇಲೂ ನಿಗಾ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಸುಲ್ಲಿ ಡೀಲ್​ ಆ್ಯಪ್​ನಲ್ಲಿ ಮುಸ್ಲಿಂ ಹುಡುಗಿಯರೇ ಟಾರ್ಗೆಟ್​.. ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡ್ತಿದ್ದವರ ಹರಾಜು

ABOUT THE AUTHOR

...view details