ಕರ್ನಾಟಕ

karnataka

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ.. ಬಂಧನ ಬೆನ್ನಲ್ಲೇ ಜಾಮೀನು ಪಡೆದ ಮಾಜಿ ಶಾಸಕ

By

Published : Jul 3, 2022, 4:28 PM IST

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಗಂಭೀರ ಆರೋಪ ಮಾಡಿರುವ ಮಾಜಿ ಶಾಸಕ ಪಿಸಿ ಜಾರ್ಜ್‌ ಅವರಿಗೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧಿತರಾದ 24 ಗಂಟೆಗಳ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಕೇರಳ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ ಜಾರ್ಜ್
ಕೇರಳ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ ಜಾರ್ಜ್

ತಿರುವನಂತಪುರಂ (ಕೇರಳ): ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದಿರುವ ಮಾಜಿ ಶಾಸಕ ಪಿಸಿ ಜಾರ್ಜ್ ಅವರು ಶನಿವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಉದ್ಯಮಿ ಫಾರಿಸ್ ಅಬೂಬಕರ್ ಅವರ ಕೈವಾಡದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜ್ ಅವರು, ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್ ಅವರ 'ಎಕ್ಸಾಲಾಜಿಕ್' ಸಂಸ್ಥೆಯು ರಾಜ್ಯದ ಜನರ ಡೇಟಾವನ್ನು ಮಾರುವ ಕೆಲಸ ಮಾಡುತ್ತಿದೆ ಮತ್ತು ಪಿಣರಾಯಿ ವಿಜಯನ್ ಅವರು ಆಗಾಗ್ಗೆ ಯುಎಸ್‌ಎಗೆ ಭೇಟಿ ನೀಡುವುದು ಅನುಮಾನವಾಗಿದೆ. ಆದ್ದರಿಂದ ಇಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇವರಿಗೆ ಮೂರು ಗಂಟೆಗಳ ವಿಚಾರಣೆಯ ನಂತರ ಕಟ್ಟುನಿಟ್ಟಿನ ಆದೇಶದೊಂದಿಗೆ ತಿರುವನಂತಪುರ ನ್ಯಾಯಾಲಯವು ಜಾಮೀನು ನೀಡಿದೆ. ತಿರುವನಂತಪುರಂನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಕುರಿತು ಚರ್ಚೆಗೆ ಕರೆದಿದ್ದಾಗ ಜಾರ್ಜ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಪರಿಣಾಮ ಪೊಲೀಸರು ಮಾಜಿ ಶಾಸಕ ಜಾರ್ಜ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತಿರೇಕದ ವರ್ತನೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ದೂರುದಾರರು ಸೋಲಾರ್ ಹಗರಣದ ಆರೋಪಿಯೂ ಆಗಿದ್ದಾರೆ.

ಇದನ್ನೂ ಓದಿ: ತಾಜ್‌ಮಹಲ್‌ ನೆಲಮಾಳಿಗೆಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳಿವೆಯಾ? ಎಎಸ್​ಐನಿಂದ ಹೊರಬಿತ್ತು ಮಹತ್ವದ ವಿಷ್ಯ

TAGGED:

ABOUT THE AUTHOR

...view details