ತ್ರಿಶೂರ್:ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಅವರು ತಮ್ಮ ಚಿನ್ನದ ಬಳೆಗಳಲ್ಲಿ ಒಂದನ್ನು ರೋಗಿಯೊಬ್ಬರಿಗೆ ದಾನ ಮಾಡಿದ್ದಾರೆ. ಕಿಡ್ನಿ ಕಸಿ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲದ ರೋಗಿಯ ಚಿಕಿತ್ಸೆಗಾಗಿ ಸಚಿವರು ತಮ್ಮ ಬಳೆಯನ್ನು ದಾನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಪ್ರದೇಶದಲ್ಲಿ ಮೂತ್ರಪಿಂಡ ಕಸಿ ವೈದ್ಯಕೀಯ ನೆರವು ಸಮಿತಿಯ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಬೇಕಾದ 27 ವರ್ಷದ ವಿವೇಕ್ ಪ್ರಭಾಕರ್ ಅವರ ದುಃಸ್ಥಿತಿಯನ್ನು ಕಂಡು ಸಚಿವರು ಭಾವುಕರಾದರು.