ಕರ್ನಾಟಕ

karnataka

ETV Bharat / bharat

51 ವರ್ಷದ ಪತ್ನಿಯನ್ನು ಕರೆಂಟ್ ಶಾಕ್ ಕೊಟ್ಟು ಕೊಂದ 28 ವರ್ಷದ ಪತಿ - ಪತ್ನಿಯನ್ನು ಕೊಲೆಗೈದ ಪತಿ

ಪತ್ನಿಯನ್ನ ತಾನೇ ಕೊಂದಿರೋದಾಗಿ ಪೊಲೀಸ್‌ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ..

Kerala man arrested for electrocuting wife
ಕೇರಳದಲ್ಲಿ ಪತಿಯಿಂದ ಪತ್ನಿಯ ಕೊಲೆ

By

Published : Dec 27, 2020, 7:01 AM IST

ತಿರುವನಂತಪುರಂ(ಕೇರಳ) :28 ವರ್ಷದ ಯುವಕ ತನ್ನ 51 ವರ್ಷದ ಪತ್ನಿಯನ್ನು ಕರೆಂಟ್ ಶಾಕ್ ನೀಡಿ ಕೊಲೆ ಮಾಡಿರುವ ಘಟನೆ ತಿರುವನಂತಪುರಂ ಜಿಲ್ಲೆಯ ಕರಕ್ಕೋಣಂ ಬಳಿ ನಡೆದಿದೆ.

ಪೊಲೀಸರ ಹೇಳಿಕೆಯ ಪ್ರಕಾರ, ಸಖಾ ಕುಮಾರಿ (51) ಎಂಬುವರು ಸುಮಾರು ಎರಡು ತಿಂಗಳ ಹಿಂದೆ ಅರುಣ್ (28) ಎಂಬುವರನ್ನು ಮದುವೆಯಾಗಿದ್ದರು. ಅರುಣ್ ಅವರ ವೈವಾಹಿಕ ಜೀವನ ಸಂತೋಷವಾಗಿರಲಿಲ್ಲ ಮತ್ತು ದಂಪತಿ ಪದೇಪದೆ ಜಗಳವಾಡುತ್ತಿದ್ದರು.

ಶನಿವಾರ ಬೆಳಗ್ಗೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮನೆ ಅಲಂಕರಿಸುವ ವೇಳೆ ಪತ್ನಿ ಸಖಾ ಕುಮಾರಿ ಕರೆಂಟ್ ಶಾಕ್​ ತಗುಲಿದೆ ಎಂದು ಅರುಣ್ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದರು. ಅವರ ಸಹಾಯದಿಂದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಅರುಣ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಅರುಣ್‌ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಮತ್ತು ಸಖಾ ಕುಮಾರಿ ಅವರ ಮರಣೋತ್ತರ ಪರೀಕ್ಷಾ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ABOUT THE AUTHOR

...view details