ತಿರುವನಂತಪುರಂ :ವಿಧಾನಸಭಾ ಚುನಾವಣೆಗೆ ಪಕ್ಷ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆ ಕೇರಳ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಲತಿಕಾ ಸುಭಾಷ್ ಅವರು ತಿರುವನಂತಪುರಂನ ಪಕ್ಷದ ಕಚೇರಿಯ ಮುಂದೆ ತಲೆ ಬೋಳಿಸಿಕೊಂಡರು. ನಾನು ಯಾವುದೇ ಪಕ್ಷಕ್ಕೆ ಸೇರುತ್ತಿಲ್ಲ. ಆದರೆ, ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಲತಿಕಾ ಹೇಳಿದ್ದಾರೆ.
ತಲೆ ಬೋಳಿಸಿಕೊಂಡು ಅಸಮಾಧಾನ ಪ್ರದರ್ಶಿಸಿದ ಕೇರಳ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ! - Kerala Congress denied ticket for Mahila Congress chief
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಅವರು ಅಭ್ಯರ್ಥಿಗಳ ಪಟ್ಟಿ ಮಾಡುವಾಗ ಮಹಿಳೆಯರನ್ನು ಕಡೆಗಣಿಸಿದ್ದಾರೆ ಎಂದು ಲತಿಕಾ ಸುಭಾಷ್ ಕಿಡಿಕಾರಿದ್ದಾರೆ..
ತಲೆ ಬೋಳಿಸಿಕೊಂಡ ಕೇರಳ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಅವರು ಅಭ್ಯರ್ಥಿಗಳ ಪಟ್ಟಿ ಮಾಡುವಾಗ ಮಹಿಳೆಯರನ್ನು ಕಡೆಗಣಿಸಿದ್ದಾರೆ ಎಂದು ಲತಿಕಾ ಸುಭಾಷ್ ಕಿಡಿಕಾರಿದ್ದಾರೆ.
ಒಟ್ಟು 91 ಅಭ್ಯರ್ಥಿಗಳ ಪೈಕಿ ಕೇವಲ 9 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಕನಿಷ್ಠ ಶೇ.20ರಷ್ಟು ಮಹಿಳೆಯರಿಗೆ ಟಿಕೆಟ್ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.