ಕರ್ನಾಟಕ

karnataka

ETV Bharat / bharat

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: LDF​ ಮುನ್ನಡೆ, UDF ಯಥಾಸ್ಥಿತಿ, ಬಿಜೆಪಿ ಚೇತರಿಕೆ - ಕೇರಳ ಸ್ಥಳೀಯ ಚುನಾವಣೆಯಲ್ಲಿ ಎಲ್​ಡಿಎಫ್​

ಕೇರಳದಲ್ಲಿ ಮೂರು ಹಂತಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಹೊಮ್ಮುತ್ತಿದ್ದು, ಬಿಜೆಪಿ ಮೊದಲಿಗಿಂತ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ.

Left Democratic Front
ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್

By

Published : Dec 16, 2020, 3:59 PM IST

ತಿರುವನಂತಪುರಂ (ಕೇರಳ):ದೇವರನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ಸದ್ಯದ ಅಂಕಿ ಅಂಶಗಳ ಪ್ರಕಾರ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್​ಡಿಎಫ್) ಮೈತ್ರಿಕೂಟ ಮೇಲುಗೈ ಸಾಧಿಸಿದೆ.

ಯುಡಿಎಫ್ ಬಹುತೇಕ ಯಥಾಸ್ಥಿತಿ ಹೊಂದಿದೆ. ಬಿಜೆಪಿಯ ಬಲ ತುಸು ಹೆಚ್ಚಾಗಿದೆ. ಈ ಮೂಲಕ ಕೇಸರಿ ಪಾಳಯ ಕೂಡಾ ಕೇರಳ ರಾಜಕೀಯದಲ್ಲಿ ಗಮನಾರ್ಹ ಪಕ್ಷವಾಗಿ ಹೊರಹೊಮ್ಮಿದೆ.

ಓದಿ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಆಡಳಿತಾರೂಢ ಎಲ್‌ಡಿಎಫ್‌-ವಿರೋಧ ಪಕ್ಷಗಳ ಪೈಪೋಟಿ

ತಿರುವನಂತರಪುರ ಪಾಲಿಕೆಯನ್ನು ಉಳಿಸಿಕೊಂಡಿರುವ ಎಲ್​ಡಿಎಫ್ ಮೈತ್ರಿಕೂಟ ನೂರು ವಾರ್ಡ್​ಗಳಲ್ಲಿ 51ರಲ್ಲಿ ಜಯಭೇರಿ ಕಂಡಿದೆ. ಎನ್​ಡಿಎ ಮೈತ್ರಿಕೂಟ 34 ವಾರ್ಡ್​ಗಳಲ್ಲಿ, ಯುಡಿಎಫ್​ 10 ವಾರ್ಡ್​ಗಳಲ್ಲಿ ಹಾಗೂ ಇತರೇ ಪಕ್ಷಗಳು ಉಳಿದ ವಾರ್ಡ್​ಗಳಲ್ಲಿ ಜಯ ದಾಖಲಿಸಿವೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಇತ್ತೀಚಿನ ಫಲಿತಾಂಶ:

ಗ್ರಾಮ ಪಂಚಾಯತ್​-941

  • ಎಲ್​ಡಿಎಫ್​​ -522
  • ಯುಡಿಎಫ್​​ -363
  • ಎನ್​​ಡಿಎ-23
  • ಇತರೆ-32

ಬ್ಲಾಕ್ ಪಂಚಾಯತ್​​-152

  • ಎಲ್​ಡಿಎಫ್-108
  • ಯುಡಿಎಫ್-44

ಜಿಲ್ಲಾ ಪಂಚಾಯತ್​​​-14

  • ಎಲ್​ಡಿಎಫ್-10
  • ಯುಡಿಎಫ್-4

ಮುನ್ಸಿಪಾಲಿಟಿ-86

  • ಎಲ್​ಡಿಎಫ್-35
  • ಯುಡಿಎಫ್-45
  • ಎನ್​​ಡಿಎ -2
  • ಇತರೆ -4

ಕಾರ್ಪೋರೇಷನ್​​- 6

  • ಎಲ್​ಡಿಎಫ್-3
  • ಯುಡಿಎಫ್-3

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂರು ಹಂತಗಳಲ್ಲಿ ನಡೆದಿದೆ. ಒಟ್ಟು 941 ಗ್ರಾಮ ಪಂಚಾಯತ್ ಸ್ಥಾನಗಳು, 152 ಬ್ಲಾಕ್ ಪಂಚಾಯತ್‌ ಸ್ಥಾನಗಳು, 14 ಜಿಲ್ಲಾ ಪಂಚಾಯತ್‌, 86 ಮುನ್ಸಿಪಾಲಿಟಿಗಳು ಹಾಗು ಆರು ಕಾರ್ಪೋರೇಶನ್‌ಗಳಿಗೆ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಶೇ 72.67 ಮತದಾನವಾದರೆ, ಎರಡನೇ ಹಂತದಲ್ಲಿ ಶೇ 76.38, ಮೂರನೇ ಮತ್ತು ಅಂತಿಮ ಹಂತದಲ್ಲಿ ಶೇ 78.64 ರಷ್ಟು ಪೋಲಿಂಗ್‌ ಆಗಿತ್ತು. ಈಗ ಎಲ್ಲಾ ಚುನಾವಣೆಗಳ ಫಲಿತಾಂಶ ಬಹಿರಂಗವಾಗುತ್ತಿದೆ.

ABOUT THE AUTHOR

...view details