ತಿರುವನಂತಪುರಂ (ಕೇರಳ): ಅಲಪ್ಪುಳದ ನಿರ್ಗಮಿತ ಜಿಲ್ಲಾಧಿಕಾರಿ ರೇಣು ರಾಜ್ ಅವರು ಶ್ರೀರಾಮ್ ವೆಂಕಿಟ್ರಾಮನ್ ಹಾಗೂ ಅವರ ಪತಿಗೆ ಮಂಗಳವಾರ ಅಧಿಕಾರ ಹಸ್ತಾಂತರಿಸಿದ ಅಪರೂಪದ ಘಟನೆ ನಡೆಯಿತು. ರೇಣು ರಾಜ್ ವೆಂಕಿಟ್ರಾಮನ್ ಅವರನ್ನು ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಆಹ್ವಾನಿಸಿ, ಹಸ್ತಲಾಘವ ಮಾಡಿದರು. ಇನ್ನೊಂದೆಡೆ ವೆಂಕಿಟ್ರಾಮನ್ ಹುದ್ದೆಯನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾರ್ಯಕರ್ತರು ಪ್ರತಿಭಟನೆ ನಡೆಸುವುದರೊಂದಿಗೆ ಕಚೇರಿಯ ಹೊರಗೆ ಗೊಂದಲ ಸೃಷ್ಟಿಸಿದರು.
ಕೇರಳದಲ್ಲೊಂದು ಅಪರೂಪದ ಘಟನೆ: ಪತಿಗೆ ಅಧಿಕಾರ ಹಸ್ತಾಂತರಿಸಿದ ಪತ್ನಿ
ಕೇರಳದ ಅಲಪ್ಪುಳದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ನಿರ್ಗಮಿತ ಜಿಲ್ಲಾಧಿಕಾರಿ ರೇಣು ರಾಜ್ ಮತ್ತು ಪತಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
ಅಪಘಾತ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಹೀಗಾಗಿ ಯುಡಿಎಫ್ ಕಾರ್ಯಕರ್ತರು ಅವರನ್ನು ಇಲ್ಲಿಗೆ ಪೋಸ್ಟ್ ಮಾಡಿರುವುದನ್ನು ವಿರೋಧಿಸಿದರು. 2019 ರಲ್ಲಿ ವೆಂಕಿಟ್ರಾಮನ್ ತಮ್ಮ ಸ್ನೇಹಿತೆ ವಾಫಾ ಫಿರೋಜ್ ಜೊತೆಗೆ ಅತಿವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದಾಗ, ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಪತ್ರಕರ್ತರೊಬ್ಬರು ಮೃತಪಟ್ಟಿದ್ದರು. 2020 ರಿಂದ ಅವರು ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ. ಅವರು ಈಗ ಆಲಪ್ಪುಳಕ್ಕೆ ಹೊಸ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ.
ಇದನ್ನೂ ಓದಿ:ಈಗಾಗಲೇ ನೀವು ಸತ್ತಿದ್ದೀರಿ ಎಂದರು.. ಈ ಮಾತು ಕೇಳಿದ ವೃದ್ಧರೆಲ್ಲಾ ಶಾಕ್..! ಏನಿದು ಎಡವಟ್ಟು!!