ಕೊಚ್ಚಿ:ಸುಪ್ರೀಂಕೋರ್ಟ್‌ನ ಪೂರ್ವ ನಿದರ್ಶನಗಳಿಗೆ ಬದ್ಧವಾಗಿರುವ ಕಾರಣ ಮುಸ್ಲಿಂ ಮಹಿಳೆಯರು ತಮ್ಮ ಅಪ್ರಾಪ್ತ ಮಗುವಿನ ಆಸ್ತಿಯ ಪಾಲಕರಾಗಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಪಿ.ಬಿ. ಸುರೇಶ್ ಕುಮಾರ್ ಮತ್ತು ಸಿ.ಎಸ್.ಸುಧಾ ಅವರು ಈ ರೀತಿ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರು 14 ಮತ್ತು 15 ನೇ ವಿಧಿಗಳ ಪ್ರಕಾರ ಪಾಲಕರಾಗಬಹುದು. ಹೀಗಾಗಿ ಈ ಆದೇಶ ಕಾನೂನು ಉಲ್ಲಂಘನೆ ಎಂದು ವಾದಿಸಿದ್ರೂ, ಸುಪ್ರೀಂಕೋರ್ಟ್‌ನ ಪೂರ್ವ ನಿದರ್ಶನಗಳಿಗೆ ಬದ್ಧವಾಗಿರುವುದರಿಂದ ಇದು ಸರಿಯಾಗಿದೆ ಎಂದಿದ್ದಾರೆ. ಕೋಯಿಕ್ಕೋಡ್‌ನ ಸಿ.ಅಬ್ದುಲ್ ಅಜೀಜ್ ಮತ್ತು ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಹೇಳಿದೆ.