ಕೇರಳ: ಖಾಸಗಿ ಲ್ಯಾಬ್ಗಳಲ್ಲಿ ಆರ್‌ಟಿ-ಪಿಸಿಆರ್ ಟೆಸ್ಟ್ ದರವನ್ನು 1,700 ರೂ.ಗೆ 500 ರೂ.ಗೆ ಇಳಿಸಲು ಕೇರಳ ಸರ್ಕಾರ ನೀಡಿದ ಆದೇಶಕ್ಕೆ ತಡೆ ಆಜ್ಞೆ ತರಲು ಕೇರಳ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಆರ್‌ಟಿ - ಪಿಸಿಆರ್ ಟೆಸ್ಟ್ಗೆ ದರ ನಿಗದಿಗೊಳಿಸಿದ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ತರಲು ಕೇರಳ ಹೈಕೋರ್ಟ್ ನಿರಾಕರಣೆ - ಆರ್‌ಟಿ-ಪಿಸಿಆರ್ ಪರೀಕ್ಷೆಯ ವೆಚ್ಚ ತಗ್ಗಿಸಿದ ಕೇರಳ
ಆರ್‌ಟಿ - ಪಿಸಿಆರ್ ಪರೀಕ್ಷೆಯ ವೆಚ್ಚವನ್ನು ಈಗಿನ 1700 ರೂ.ಗಳಿಂದ 500 ರೂ.ಗೆ ಇಳಿಸುವಂತೆ ಕೇರಳ ಸರ್ಕಾರ ಖಾಸಗಿ ಲ್ಯಾಬ್‌ಗಳಿಗೆ ಆದೇಶಿಸಿದೆ.
ರಾಜ್ಯ ಸರ್ಕಾರದ ನಿರ್ಧಾರ ಮಾರುಕಟ್ಟೆ ಸಂಶೋಧನೆಯ ಆಧಾರದ ಮೇಲೆ ಎಂದು ಹೇಳಿ ಸರ್ಕಾರದ ಆದೇಶ ಪ್ರಶ್ನಿಸಿ10 ಖಾಸಗಿ ಲ್ಯಾಬ್ಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.ಈ ಅರ್ಜಿಯ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎನ್ ನಗರೇಶ್, "ಆರ್‌ಟಿ-ಪಿಸಿಆರ್ ಪರೀಕ್ಷೆಯ ವೆಚ್ಚವು ಮೂಗು ಮತ್ತು ಗಂಟಲು ಸ್ವ್ಯಾಬ್ ಅನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುವುದು ಸೇರಿ 135 ರೂ. ರಿಂದ 250 ರೂ ಎಂದು ಹೇಳಿದೆ.
ಖಾಸಗಿ ಆಸ್ಪತ್ರೆಗಳು ಅಧಿಕ ಶುಲ್ಕ ವಿಧಿಸುವುದನ್ನು ನಿಯಂತ್ರಿಸಲು ಪಿಐಎಲ್ ಸಲ್ಲಿಕೆಯಾದ ನಂತರ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆ ದರ ನಿಗದಿಪಡಿಸಲು ಮತ್ತು ನಿಗದಿತ ಶುಲ್ಕವನ್ನು ಖಚಿತಪಡಿಸಿಕೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆರ್‌ಟಿ-ಪಿಸಿಆರ್ ಪರೀಕ್ಷೆಯ ವೆಚ್ಚವನ್ನು ಈಗಿನ 1700 ರೂ.ಗಳಿಂದ 500 ರೂ.ಗೆ ಇಳಿಸುವಂತೆ ಕೇರಳ ಸರ್ಕಾರ ಖಾಸಗಿ ಲ್ಯಾಬ್‌ಗಳಿಗೆ ಆದೇಶಿಸಿದೆ.