ಕರ್ನಾಟಕ

karnataka

ETV Bharat / bharat

ತಂದೆಯಿಂದಲೇ 10 ವರ್ಷಕ್ಕೆ ಗರ್ಭಿಣಿಯಾದ ಬಾಲೆ: ಕೇರಳ ಹೈಕೋರ್ಟ್‌ನಿಂದ ಮಹತ್ವದ ಆದೇಶ - ಕೇರಳ ನ್ಯಾಯಾಲಯದಿಂದ ಮಹತ್ವದ ಆದೇಶ

ಗರ್ಭಿಣಿ ಬಾಲಕಿಯ ತಾಯಿಯ ಅರ್ಜಿಯನ್ನು ಸ್ವೀಕರಿಸಿದ ಹೈಕೋರ್ಟ್, ಭ್ರೂಣಕ್ಕೆ ಈಗ 31 ವಾರಗಳಾಗಿದ್ದು, ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮತ್ತು ಗರ್ಭಧಾರಣೆಯನ್ನು ಕೊನೆಗೊಳಿಸುವಂತೆ ವೈದ್ಯಕೀಯ ತಂಡವನ್ನು ಕೇಳಿದೆ.

ತಂದೆಯಿಂದಲೇ 10 ವರ್ಷಕ್ಕೆ ಗರ್ಭಿಣಿಯಾದ ಬಾಲೆ
ತಂದೆಯಿಂದಲೇ 10 ವರ್ಷಕ್ಕೆ ಗರ್ಭಿಣಿಯಾದ ಬಾಲೆ

By

Published : Mar 11, 2022, 10:08 PM IST

ಕೊಚ್ಚಿ: ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೊಳಗಾಗಿ ಗರ್ಭಿಣಿಯಾಗಿರುವ 10 ವರ್ಷದ ಬಾಲಕಿಗೆ ನ್ಯಾಯ ನೀಡುವ ಉದ್ದೇಶದಿಂದ ಕೇರಳ ಹೈಕೋರ್ಟ್ ಮಹತ್ವದ ಅದೇಶ ನೀಡಿದೆ.

ಈಗ ಆಕೆಯ ಗರ್ಭಧಾರಣೆ 31 ವಾರಗಳನ್ನು ಕಳೆದಿದೆ. ಪರಿಣಾಮ ತಿರುವನಂತಪುರಂನ ಎಸ್‌ಎಟಿ ಆಸ್ಪತ್ರೆಯಿಂದ ಗರ್ಭವನ್ನು ವೈದ್ಯಕೀಯ ಚಿಕಿತ್ಸೆಯ ಮೂಲಕ ಅಂತ್ಯಗೊಳಿಸಲು ನ್ಯಾಯಾಲಯ ಅನುಮತಿ ನೀಡಿದೆ.

ಇದನ್ನೂ ಓದಿ: ಭಾರತದ ರಫೇಲ್ ಎದುರಿಸಲು 'ಮೇಡ್ ಇನ್ ಚೀನಾ' ಫೈಟರ್​ ಜೆಟ್ ಖರೀದಿಸಿದ ಪಾಕ್​​

ಈ ಹಿಂದೆ ಸಂತ್ರಸ್ತೆಯನ್ನು ಪರೀಕ್ಷಿಸಲು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಕೋರ್ಟ್‌ ಆದೇಶ ನೀಡಿತ್ತು. ಈ ಪ್ರಕ್ರಿಯೆಯಲ್ಲಿ ಮಗು ಬದುಕುಳಿಯುವ ಸಾಧ್ಯತೆ ಶೇ 80ರಷ್ಟು ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದರಿಂದ, ಶಿಶು ಬದುಕುಳಿದರೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ಒದಗಿಸಲು ಸಾಧ್ಯವೇ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಆಸ್ಪತ್ರೆಯನ್ನು ಕೇಳಿದೆ.

ಈ ನಿರ್ದೇಶನಗಳೊಂದಿಗೆ, ಅತ್ಯಾಚಾರ ಸಂತ್ರಸ್ತೆಯ ತಾಯಿ ಆಕೆಯ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸುವಂತೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ಅಂಗೀಕರಿಸಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಗರ್ಭಿಣಿಯಾದ 10 ವರ್ಷದ ಬಾಲಕಿಯ ಸ್ಥಿತಿ ದುರದೃಷ್ಟಕರ. ಇದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಯ ಕೃತ್ಯದ ಬಗ್ಗೆ ಕೋರ್ಟ್‌ ಬೇಸರ ಹೊರಹಾಕಿದೆ.

ABOUT THE AUTHOR

...view details