ಕರ್ನಾಟಕ

karnataka

ETV Bharat / bharat

ಪಿಎಫ್‌ಐ ರ್‍ಯಾಲಿಯಲ್ಲಿ ಪ್ರಚೋದನಾತ್ಮಕ ಘೋಷಣೆ: ಬಾಲಕನ ಹೊತ್ತು ಸಾಗಿದ ಆರೋಪಿ ವಶಕ್ಕೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್‌ಐ) ರ್‍ಯಾಲಿಯಲ್ಲಿ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆ ಕೂಗಿದ ಘಟನೆ ಬೆಳಕಿಗೆ ಬಂದ ನಂತರ ಕೇರಳ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

Kerala hate slogan, One person taken into custody by Kerala police, PFI against FIR in Kerala, Kerala PFI news, ಕೇರಳಪ್ರಚೋದನಕಾರಿ ಘೋಷಣೆ, ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದ ಕೇರಳ ಪೊಲೀಸರು, ಕೇರಳದಲ್ಲಿ ಪಿಎಫ್​ಐ ವಿರುದ್ಧ ಎಫ್‌ಐಆರ್, ಕೇರಳ ಪಿಎಫ್​ಐ ಸುದ್ದಿ,
ಕೇರಳದಲ್ಲಿ ಪ್ರಚೋದನಾತ್ಮಕ ಘೋಷಣೆ

By

Published : May 24, 2022, 10:06 AM IST

ಅಲಪ್ಪುಳ (ಕೇರಳ): ಪಾಪ್ಯುಲರ್ ಫ್ರಂಟ್ ಆಫ್​ ಇಂಡಿಯಾ ಕಾರ್ಯಕರ್ತರ ಬೃಹತ್‌ ಮೆರವಣಿಗೆಯಲ್ಲಿ ಹಿಂದೂ, ಕ್ರಿಶ್ಚಿಯನ್‌ ಧರ್ಮೀಯರ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಬಾಲಕನನ್ನು ಹೆಗಲ ಮೇಲೆ ಹೊತ್ತು ಸಾಗಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಟ್ಟುಪೆಟ್ಟಾ ಮೂಲದ ಅನ್ಸಾರ್ ಎಂಬಾತನನ್ನು ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಅಲಪ್ಪುಳ ದಕ್ಷಿಣ ಪೊಲೀಸರು ವಶಕ್ಕೆ ಪಡೆದರು.

ಮೆರವಣಿಗೆಯಲ್ಲಿ ಬಾಲಕನಿಂದ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿಸಿದ್ದಕ್ಕಾಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಬೆಳವಣಿಗೆಯ ನಂತರ ಎರಟ್ಟುಪೆಟ್ಟಾದಲ್ಲಿ ಪಿಎಫ್‌ಐ ಕಾರ್ಯಕರ್ತರು ಪೊಲೀಸರ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಪಿಎಫ್‌ಐ ರ್‍ಯಾಲಿಯಲ್ಲಿ ಬಾಲಕನಿಂದ ಪ್ರಚೋದನಾತ್ಮಕ ಘೋಷಣೆ: ಕೇರಳ ಪೊಲೀಸರಿಂದ ಎಫ್‌ಐಆರ್‌

ಪಿಎಫ್‌ಐ ಅಲಪ್ಪುಳ ಜಿಲ್ಲಾಧ್ಯಕ್ಷ, ಕಾರ್ಯದರ್ಶಿ ಮತ್ತು ಇತರ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details