ಕರ್ನಾಟಕ

karnataka

ETV Bharat / bharat

ಮೇ 8ರಿಂದ ರಾಜ್ಯಾದ್ಯಂತ ಲಾಕ್​​ಡೌನ್​ ಹೇರಿದ ಕೇರಳ ಸರ್ಕಾರ - ಕೇರಳ ಸರ್ಕಾರ

ಕೋವಿಡ್​ ಕೇಸ್​ಗಳ ಸಂಖ್ಯೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ನಂತರ ಮೂರನೇ ಸ್ಥಾನದಲ್ಲಿರುವ ಕೇರಳದಲ್ಲಿ 9 ದಿನಗಳ ಲಾಕ್​ಡೌನ್ ​ವಿಧಿಸಿ ಸಿಎಂ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ.

Kerala govt announces nine-day lockdown from May 8
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

By

Published : May 6, 2021, 11:38 AM IST

ತಿರುವನಂತಪುರಂ: ದಿನವೊಂದರಲ್ಲಿ 41,953 ಹೊಸ ಕೋವಿಡ್​ ಕೇಸ್ ಹಾಗೂ 58 ಸಾವು​ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ ಮೇ 8ರಿಂದ ಮೇ 16ರವರೆಗೆ 9 ದಿನಗಳ ಲಾಕ್​​ಡೌನ್​ ಘೋಷಿಸಿದೆ.

ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಲಾಕ್​​ಡೌನ್​​ನಂತಹ ಕಠಿಣ ನಿರ್ಬಂಧಗಳು ರಾಜ್ಯದಲ್ಲಿ ಜಾರಿಯಲ್ಲಿದ್ದು, ವೈರಸ್​ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಲಾಕ್​​ಡೌನ್​ ಹೇರಿರುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಕೊರೊನಾ 2ನೇ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚಳ: ಆರೋಗ್ಯ ಇಲಾಖೆಗೆ ಹೆಚ್ಚಿದ ಒತ್ತಡ

ಕೋವಿಡ್​ ಕೇಸ್​ಗಳ ಸಂಖ್ಯೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ನಂತರ ಮೂರನೇ ಸ್ಥಾನದಲ್ಲಿ ಕೇರಳ ಇದೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ 17,43,932ಕ್ಕೆ ಏರಿಕೆಯಾಗಿದ್ದು, ಈವರೆಗೆ 5,565 ಜನರು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. 3,75,658 ಕೇಸ್​ಗಳು ಸಕ್ರಿಯವಾಗಿವೆ.

ABOUT THE AUTHOR

...view details