ತಿರುವನಂತಪುರಂ: ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಖಾನ್ ಅವರ ಆರೋಗ್ಯದ ಮೇಲೆ ನಿಗಾ ಇಡಲು ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.
ಕೋವಿಡ್ ಹಿನ್ನೆಲೆ ಕೇರಳ ರಾಜ್ಯಪಾಲ ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ದಾಖಲು - ಕೇರಳ ರಾಜ್ಯಪಾಲರಿಗೆ ಕೋವಿಡ್ ಸೋಂಕು
ಕೋವಿಡ್ ಭಾದಿತರಾಗಿರುವ ಕೇರಳ ರಾಜ್ಯಪಾಲರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಕೇರಳ ರಾಜ್ಯಪಾಲರಿಗೆ ಕೋವಿಡ್ ಸೋಂಕು
ರಾಜ್ಯಪಾಲರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲು ವೈದ್ಯರ ತಂಡವನ್ನೂ ರಚಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 7 ರಂದು ಕೋವಿಡ್ ದೃಢಪಟ್ಟ ಬಳಿಕ ರಾಜ್ಯಪಾಲರು ರಾಜಭವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.