ಕರ್ನಾಟಕ

karnataka

ETV Bharat / bharat

ಕೇರಳ ಚುನಾವಣೆ: ಅಭ್ಯರ್ಥಿ ಆಯ್ಕೆಯಲ್ಲಿ ನಡೆದಿತ್ತಾ 'ಮೌನ ಒಪ್ಪಂದ'! - ಆರ್‌ಎಸ್‌ಎಸ್ ವಿಚಾರವಾದಿ ಮತ್ತು ಆರ್ಗನೈಸರ್, ಆರ್‌ಎಸ್‌ಎಸ್ ಪತ್ರಿಕೆಯ ಮಾಜಿ ಸಂಪಾದಕ ಬಾಲಶಂಕರ್

ಮತ ಹಂಚಿಕೆ ಕುರಿತು ಬಿಜೆಪಿ ರಾಜ್ಯ ನಾಯಕತ್ವ ಸಿಪಿಎಂ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಆರ್‌ಎಸ್‌ಎಸ್ ವಿಚಾರವಾದಿ ಮತ್ತು ಆರ್ಗನೈಸರ್, ಆರ್‌ಎಸ್‌ಎಸ್ ಪತ್ರಿಕೆಯ ಮಾಜಿ ಸಂಪಾದಕ ಬಾಲಶಂಕರ್ ಹೇಳಿಕೆ ನೀಡಿದ್ದರು. ಇದನ್ನು ಶಾಸಕ ಒ. ರಾಜಗೋಪಾಲ್ ಖಂಡಿಸಿದ್ದಾರೆ.

Kerala election
ಕೇರಳ ಚುನಾವಣೆ

By

Published : Mar 19, 2021, 6:23 AM IST

ತಿರುವನಂತಪುರಂ: ಸತತ ಪ್ರಯತ್ನಗಳ ಬಳಿಕ ಕೇರಳ ವಿಧಾನಸಭೆಯಲ್ಲಿ ಒ.ರಾಜಗೋಪಾಲ್​ ಮೂಲಕ ಬಿಜೆಪಿ ಪಕ್ಷ ಖಾತೆ ತೆರೆದಿದೆ. 2016 ರ ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂನ ನೆಮೊಮ್ ಕ್ಷೇತ್ರದಿಂದ ಕೇರಳದ ಮೊದಲ ಬಿಜೆಪಿ ಶಾಸಕರಾಗಿ ಒ. ರಾಜಗೋಪಾಲ್ ಆಯ್ಕೆಯಾಗಿದ್ದರು.

ಈಗ ಐದು ವರ್ಷಗಳ ನಂತರ, ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿರುವಾಗ, ಒ.ರಾಜಗೋಪಾಲ್ ಅಭ್ಯರ್ಥಿಯಲ್ಲ. ಮಾಜಿ ಮಿಜೋರಾಂ ಗವರ್ನರ್ ಮತ್ತು ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ.

ರಾಜಶೇಖರನ್ ಚುನಾವಣಾ ಕಾರ್ಯಗಳಲ್ಲಿ ಸಕ್ರಿಯವಾಗಿಲ್ಲದಿದ್ದರೂ, ಅವರು ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇರಳದ ರಾಜಕೀಯ-ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಕೇರಳದ ಯಾವುದೇ ಚುನಾವಣೆಗಳು ಮತ ಹಂಚಿಕೆ ಮತ್ತು ರಾಜಕೀಯ ಪಕ್ಷಗಳ ನಡುವಿನ ಮೌನ ತಿಳಿವಳಿಕೆಯ ಮೇಲಿನ ಆರೋಪಗಳು ಮತ್ತು ಪ್ರತಿ - ಆರೋಪಗಳಿಗೆ ಸಾಕ್ಷಿಯಾಗಿವೆ.

ಒ. ರಾಜಗೋಪಾಲ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸ್ವತಃ ಮತ ಹಂಚಿಕೆ ಕುರಿತ ಮೌನ ಒಪ್ಪಂದಗಳು ಮೊದಲೇ ನಡೆದಿವೆ. ಮಲಬಾರ್ ಪ್ರದೇಶದಲ್ಲಿ ಕಾಂಗ್ರೆಸ್ - ಲೀಗ್ - ಬಿಜೆಪಿ ಮೈತ್ರಿ ಅಸ್ತಿತ್ವದಲ್ಲಿತ್ತು. ಅದು ಬಿಜೆಪಿಗೆ ಬಲವಾದ ಮತ್ತು ಪ್ರಯೋಜನಕಾರಿಯಾಗಿದೆ ಎಂದು ರಾಜಗೋಪಾಲ್ ಹೇಳಿದರು. ಇಂತಹ ವ್ಯವಸ್ಥೆಗಳು ಪ್ರಾದೇಶಿಕ ಮಟ್ಟದಲ್ಲಿ ನಾಯಕತ್ವದ ಅನುಮತಿಯೊಂದಿಗೆ ಇದ್ದವು ಎಂದು ರಾಜಗೋಪಾಲ್ ಬಹಿರಂಗಪಡಿಸಿದರು. ಪ್ರಾಯೋಗಿಕ ರಾಜಕಾರಣದಲ್ಲಿ ಹೊಂದಾಣಿಕೆಗಳು ಬೇಕಾಗಬಹುದು, ಆದರೆ ನಾಯಕತ್ವಕ್ಕೆ ಮಾತ್ರ ತಿಳಿದಿರಬೇಕೇ ಹೊರತು ಜನರಿಗೆ ಅಲ್ಲ ಎಂದರು.

ಆರ್‌ಎಸ್‌ಎಸ್ ವಿಚಾರವಾದಿ ಮತ್ತು ಆರ್ಗನೈಸರ್, ಆರ್‌ಎಸ್‌ಎಸ್ ಪತ್ರಿಕೆಯ ಮಾಜಿ ಸಂಪಾದಕ ಬಾಲಶಂಕರ್ ನೀಡಿದ ಹೇಳಿಕೆಯನ್ನು ರಾಜಗೋಪಾಲ್ ಖಂಡಿಸಿದರು. ಮತ ಹಂಚಿಕೆ ಕುರಿತು ಬಿಜೆಪಿ ರಾಜ್ಯ ನಾಯಕತ್ವ ಸಿಪಿಎಂ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಬಾಲಶಂಕರ್ ಈ ಹಿಂದೆ ಹೇಳಿಕೆ ನೀಡಿದ್ದರು. ಸಾರ್ವಜನಿಕವಾಗಿ ತನ್ನ ಹಿರಿಯ ನಾಯಕರ ಈ ಎಲ್ಲಾ ಹೇಳಿಕೆಗಳು ಕೇರಳದಲ್ಲಿ ಬಿಜೆಪಿಯನ್ನು ರಕ್ಷಣಾತ್ಮಕವಾಗಿಸಿವೆ.

ABOUT THE AUTHOR

...view details