ತಿರುವನಂತಪುರಂ: ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಾಯನ್ಸ್ (ಎನ್‌ಡಿಎ) ಗಮನಾರ್ಹ ಮುನ್ನಡೆ ಸಾಧಿಸುವ ಲಕ್ಷಣಗಳು ಕ್ಷೀಣಿಸಿವೆ.
ಶತಕದ ಸನಿಹ LDF ಮುನ್ನಡೆ: 40 ವರ್ಷಗಳ ಸಂಪ್ರದಾಯಕ್ಕೆ ಮೊದಲ ಬ್ರೇಕ್ - ಚುನಾವಣಾ ಫಲಿತಾಂಶ ಇಂದು ಲೈವ್
ವಿವಿಧ ಸಮೀಕ್ಷೆಗಳ ಪ್ರಕಾರ, ಪ್ರತಿ ಐದು ವರ್ಷಗಳಿಗೊಮ್ಮೆ ಎಲ್‌ಡಿಎಫ್ ಮತ್ತು ಯುಡಿಎಫ್‌ನ ಎರಡು ಪ್ರಮುಖ ಒಕ್ಕೂಟಗಳ ನಡುವೆ ಸರ್ಕಾರ ರಚನೆ ಏರ್ಪಡುತ್ತದೆ. ಪ್ರತಿ ಐದು ವರ್ಷಗಳಿಗೆ ಒಮ್ಮೆ ಅಧಿಕಾರ ಬದಲಾಗುತ್ತದೆ. ಇದು ನಾಲ್ಕು ದಶಕಗಳಷ್ಟು ಹಳೆಯದಾದ ಸಂಪ್ರದಾಯವನ್ನು ಮುರಿಯಲು ಕೇರಳ ಸಜ್ಜಾಗಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಜ್ಜಾಗಿದೆ.
ವಿವಿಧ ಸಮೀಕ್ಷೆಗಳ ಪ್ರಕಾರ, ಪ್ರತಿ ಐದು ವರ್ಷಗಳಿಗೊಮ್ಮೆ ಎಲ್‌ಡಿಎಫ್ ಮತ್ತು ಯುಡಿಎಫ್‌ನ ಎರಡು ಪ್ರಮುಖ ಒಕ್ಕೂಟಗಳ ನಡುವೆ ಸರ್ಕಾರ ರಚನೆ ಏರ್ಪಡುತ್ತದೆ. ಪ್ರತಿ ಐದು ವರ್ಷಗಳಿಗೆ ಒಮ್ಮೆ ಅಧಿಕಾರಿ ಬದಲಾಗುತ್ತದೆ. ಇದು ನಾಲ್ಕು ದಶಕಗಳಷ್ಟು ಹಳೆಯದಾದ ಸಂಪ್ರದಾಯ ಮುರಿಯಲು ಕೇರಳ ಸಜ್ಜಾಗಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಜ್ಜಾಗಿದೆ.
140 ಸದಸ್ಯ ಬಲದ ಕೇರಳ ವಿಧಾನ ಸಭೆಗೆ ಸರ್ಕಾರ ರಚಿಸಲು 71 ಸ್ಥಾನಗಳ ಅಗತ್ಯವಿದೆ. ಸಿಎಂ ಪಿಣರಾಯಿ ವಿಜಯನ್ ಅವರ ಎಲ್‌ಡಿಎಫ್ ಒಕ್ಕೂಟ 94 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 39 ಹಾಗೂ ಎನ್‌ಡಿಎ 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.