ಕರ್ನಾಟಕ

karnataka

ETV Bharat / bharat

ಡಾಲರ್ ಕಳ್ಳಸಾಗಣೆ ಪ್ರಕರಣ: ಸ್ಪೀಕರ್ ಖಾಸಗಿ ಕಾರ್ಯದರ್ಶಿ ಹೇಳಿಕೆ ದಾಖಲಿಸಿದ ಕಸ್ಟಮ್ಸ್ ಅಧಿಕಾರಿಗಳು

ಅಯ್ಯಪ್ಪನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಗುರುವಾರ ನೋಟಿಸ್​ ನೀಡಲಾಗಿತ್ತು. ಸ್ಪೀಕರ್ ಅವರ ವೈಯಕ್ತಿಕ ಸಿಬ್ಬಂದಿಯ ವಿಚಾರಣೆ ನಡೆಸಲು ಸ್ಪೀಕರ್ ಪೂರ್ವಾನುಮತಿ ಅಗತ್ಯವೆಂದು ಅಯ್ಯಪ್ಪನ್ನ ವಾದಿಸಿದ್ದರು. ಆದರೆ ಕಸ್ಟಮ್ಸ್ ಅಧಿಕಾರಿಗಳು ಈ ವಾದವನ್ನು ತಳ್ಳಿಹಾಕಿದ್ದು, ಡಾಲರ್ ಕಳ್ಳಸಾಗಣೆ ಪ್ರಕರಣದ ವಿಚಾರಣೆಗಾಗಿ ಕೆ. ಅಯ್ಯಪ್ಪನ್ ಅವರಿಗೆ ಹೊಸ ನೋಟಿಸ್ ನೀಡಿತ್ತು.

Kerala dollar smuggling case
ಡಾಲರ್ ಕಳ್ಳಸಾಗಣೆ ಪ್ರಕರಣ

By

Published : Jan 9, 2021, 12:18 PM IST

ತಿರುವನಂತಪುರಂ (ಕೇರಳ): ಡಾಲರ್ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಕಸ್ಟಮ್ಸ್ ಇಲಾಖೆ (ಪ್ರಿವೆಂಟಿವ್) ಅಧಿಕಾರಿಗಳು, ಸಮನ್ಸ್ ಗೆ ಪ್ರತಿಕ್ರಿಯೆಯಾಗಿ ಇಲ್ಲಿನ ಕೇಂದ್ರ ಏಜೆನ್ಸಿ ಕಚೇರಿಗೆ ಹಾಜರಾಗಿದ್ದ ಕೇರಳ ವಿಧಾನಸಭಾ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರ ಸಹಾಯಕ ಖಾಸಗಿ ಕಾರ್ಯದರ್ಶಿ ಹೇಳಿಕೆಯನ್ನು ಶುಕ್ರವಾರ ದಾಖಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಡಾಲರ್ ಕಳ್ಳಸಾಗಣೆ ಪ್ರಕರಣದ ಕುರಿತು ಹೇಳಿಕೆಗಳನ್ನು ದಾಖಲಿಸಲು ಅವರನ್ನು ಕೊಚ್ಚಿಯ ಕಸ್ಟಮ್ಸ್ (ಪ್ರಿವೆಂಟಿವ್) ಕಚೇರಿಗೆ ಕರೆಸಲಾಗಿತ್ತು. ಸಹಾಯಕ ಖಾಸಗಿ ಕಾರ್ಯದರ್ಶಿ ಕೆ.ಅಯ್ಯಪ್ಪನ್ ಅವರು ಬೆಳಗ್ಗೆ 10:00 ಕ್ಕೆ ಕಸ್ಟಮ್ಸ್ (ಪ್ರಿವೆಂಟಿವ್) ಕಮಿಷನರೇಟ್‌ನಲ್ಲಿ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಿ ಸಂಜೆ 7 ಗಂಟೆಗೆ ಕಚೇರಿಯಿಂದ ಹೊರಟರು.

ಇದನ್ನೂ ಓದಿ: ಕೇರಳ ಡಾಲರ್ ಕಳ್ಳಸಾಗಣೆ ಪ್ರಕರಣ: ವಿಚಾರಣೆಗೆ ಹಾಜರಾದ ಕೆ. ಅಯ್ಯಪ್ಪನ್​

ಅಯ್ಯಪ್ಪನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಗುರುವಾರ ನೋಟಿಸ್​ ನೀಡಲಾಗಿತ್ತು. ಸ್ಪೀಕರ್ ಅವರ ವೈಯಕ್ತಿಕ ಸಿಬ್ಬಂದಿಯ ವಿಚಾರಣೆ ನಡೆಸಲು ಸ್ಪೀಕರ್ ಪೂರ್ವಾನುಮತಿ ಅಗತ್ಯವೆಂದು ಅಯ್ಯಪ್ಪನ್ನ ವಾದಿಸಿದ್ದರು. ಆದರೆ ಕಸ್ಟಮ್ಸ್ ಅಧಿಕಾರಿಗಳು ಈ ವಾದವನ್ನು ತಳ್ಳಿಹಾಕಿದ್ದು, ಡಾಲರ್ ಕಳ್ಳಸಾಗಣೆ ಪ್ರಕರಣದ ವಿಚಾರಣೆಗಾಗಿ ಕೆ. ಅಯ್ಯಪ್ಪನ್ ಅವರಿಗೆ ಹೊಸ ನೋಟಿಸ್ ನೀಡಿತ್ತು.

ತಿರುವನಂತಪುರಂನ ಯುಎಇ ಕಾನ್ಸುಲೇಟ್‌ನ ಮಾಜಿ ಹಣಕಾಸು ಮುಖ್ಯಸ್ಥರು ಮಸ್ಕತ್‌ಗೆ 1,90,000 ಡಾಲರ್ (ಸುಮಾರು 1.30 ಕೋಟಿ ರೂ.) ಕಳ್ಳಸಾಗಣೆ ಮಾಡಿದ್ದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ಸಂಸ್ಥೆ ಈ ಹಿಂದೆ ಅಯ್ಯಪ್ಪನ್ ಅವರಿಗೆ ಸಮನ್ಸ್ ನೀಡಿತ್ತು.

ಶುಕ್ರವಾರ ಕೇರಳ ವಿಧಾನಸಭಾ ಅಧಿವೇಶನದ ಸಿದ್ಧತೆಗಳಲ್ಲಿ ತಾವು ಕಾರ್ಯನಿರತರಾಗಿದ್ದರಿಂದ ವಿಚಾರಣೆಗೆ ಮತ್ತೊಂದು ದಿನಾಂಕವನ್ನು ಕೋರಿ ಕಸ್ಟಮ್ಸ್ ಅಧಿಕಾರಿಗಳಿಗೆ ಅಯ್ಯಪ್ಪನ್ ಮನವಿ ಮಾಡಿದ್ದರು. ಅಂತಿಮವಾಗಿ, ವಿಧಾನಸಭೆ ಅಧಿವೇಶನದ ಆರಂಭಿಕ ದಿನವಾದ ಶುಕ್ರವಾರ ಕೊಚ್ಚಿಯಲ್ಲಿ ಕಸ್ಟಮ್ಸ್ ತನಿಖಾ ತಂಡದ ಮುಂದೆ ಅಯ್ಯಪ್ಪನ್ ಹಾಜರಾಗಿ ವಿಚಾರಣೆ ಎದುರಿಸಿದರು.

ABOUT THE AUTHOR

...view details