ಕೇರಳ :ಮುಂದಿನ ಎರಡು ತಿಂಗಳಲ್ಲಿ ದೇಶದಲ್ಲಿ ಸುಮಾರು 10 ಲಕ್ಷ ಒಮಿಕ್ರಾನ್ ಪ್ರಕರಣ ಪತ್ತೆಯಾಗುವ ಸಾಧ್ಯತೆಗಳಿವೆ. ಸೋಂಕು ತಡೆಗೆ ಮತ್ತಷ್ಟು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳವ ಅವಶ್ಯಕತೆಯಿದೆ ಎಂದು ಕೇರಳ ರಾಜ್ಯದ ಕೋವಿಡ್ ತಜ್ಞರ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
2-3 ವಾರಗಳಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1000 ತಲುಪಲಿದೆ. 2 ತಿಂಗಳುಗಳಲ್ಲಿ 10 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಒಮಿಕ್ರಾನ್ ಸ್ಫೋಟಕ್ಕೆ ಇನ್ನು ಒಂದು ತಿಂಗಳು ಕೂಡ ಬಾಕಿಯಿಲ್ಲ. ಹಾಗಾಗಿ, ಇದನ್ನು ತಡೆಯಲು ಈಗಲೇ ಕ್ರಮಕೈಗೊಳ್ಳಬೇಕಿದೆ ಎಂದು ಕೇರಳದ ಕೋವಿಡ್ ತಜ್ಞರ ಸಮಿತಿಯ ಸದಸ್ಯ ಡಾ. ಟಿ.ಎಸ್ ಅನೀಶ್ ಎಚ್ಚರಿಸಿದ್ದಾರೆ.
ಹೆಚ್ಚಿನ ಒಮಿಕ್ರಾನ್ ಪ್ರಕರಣಗಳು ಹೊರ ದೇಶಗಳಿಂದ ಬಂದವರಿಂದ ದೃಢಪಟ್ಟಿರುವುದು. ಒಮಿಕ್ರಾನ್ ದೇಶದಲ್ಲಿ ಹರಡಿರುವುದನ್ನು ತಡೆಯಲು ಸಾಧ್ಯವಿಲ್ಲ. ಆದ್ರೆ, ನಮ್ಮ ವ್ಯಸ್ಥೆಯನ್ನು, ನಿಯಮಗಳನ್ನು ಸಕ್ರಿಯಗೊಳಿಸಿ ಅದನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ತಿಳಿಸಿದರು.