ಕರ್ನಾಟಕ

karnataka

ETV Bharat / bharat

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೊಲೆ ಅಪರಾಧಿಗೆ ಮರಣ ದಂಡನೆ ವಿಧಿಸಿದ ಕೇರಳ ನ್ಯಾಯಾಲಯ - ಎರ್ನಾಕುಲಂನ ಪೋಕ್ಸೊ ನ್ಯಾಯಾಲಯ

Death penalty in the case of the rape and murder: ಬಿಹಾರ ಮೂಲದ ವ್ಯಕ್ತಿ ಕೇರಳದ ಅಲುವಾದಲ್ಲಿ 5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿದ್ದಲ್ಲದೇ ಹತ್ಯೆ ಮಾಡಿದ್ದನು. ಈ ಅಪರಾಧಿಗೆ ಮಂಗಳವಾರ ಕೇರಳದ ಪೋಕ್ಸೋ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.

Death penalty
ಮರಣ ದಂಡನೆ

By ETV Bharat Karnataka Team

Published : Nov 14, 2023, 7:08 PM IST

ಕೊಚ್ಚಿ (ಕೇರಳ):ರಾಜ್ಯದ ಅಲುವಾದಲ್ಲಿ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗೆ ಎರ್ನಾಕುಲಂನ ಪೋಕ್ಸೊ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ಬಿಹಾರ ಮೂಲದ 28 ವರ್ಷದ ವಲಸೆ ಕಾರ್ಮಿಕ ಗಲ್ಲು ಶಿಕ್ಷೆ ಪಡೆದ ಅಪರಾಧಿ.

ಪ್ರಕರಣದ ಹಿನ್ನೆಲೆ: 2023 ರ ಜುಲೈ 25 ರಂದು ಎರ್ನಾಕುಲಂ ಜಿಲ್ಲೆಯ ಅಲುವಾ ಪುರಸಭೆಯಲ್ಲಿ ಬೆಳಗ್ಗೆ 2 ಗಂಟೆಗೆ ಅಪರಾಧಿ 5 ವರ್ಷದ ಬಾಲಕಿಯನ್ನು ಆಕೆಯ ಮನೆಯಿಂದ ಅಪಹರಿಸಿ ಅತ್ಯಾಚಾರ ನಡೆಸಿದ್ದಲ್ಲದೇ ಕೊಲೆ ಮಾಡಿದ್ದನು. ಜತೆಗೆ ಮೃತದೇಹವನ್ನು ಅಲುವಾ ಮಾರುಕಟ್ಟೆ ಬಳಿಯ ಪ್ರದೇಶದಲ್ಲಿ ಬಿಸಾಡಿದ್ದ. ಈತ ಬಾಲಕಿಯನ್ನು ಅಪಹರಿಸುವುದನ್ನು ಸ್ಥಳೀಯರು ಕಂಡಿದ್ದು, ಹುಡುಕಾಟ ನಡೆಸಿದ್ದಾರೆ. ಆ ವೇಳೆ, ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ತಕ್ಷಣವೇ ಬಾಲಕಿಯ ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಕೇರಳದ ವಿಶೇಷ ತನಿಖಾ ತಂಡ ಸಮಗ್ರ ತನಿಖೆ ನಡೆಸಿ ಅಪರಾಧಿಯನ್ನು ಬಂಧಿಸಿ ಆತನ ವಿರುದ್ಧ ಸೆಪ್ಟೆಂಬರ್​ 2 ರಂದು ಪೋಕ್ಸೋ ನ್ಯಾಯಲಯಕ್ಕೆ 800 ಪುಟಗಳ ಚಾರ್ಜ್​ ಶೀಟ್ ಅ​​ನ್ನು ಸಲ್ಲಿಸಿತ್ತು. ಎರ್ನಾಕುಲಂ ಪೋಕ್ಸೋ ನ್ಯಾಯಾಲಯ ಸೆಪ್ಟೆಂಬರ್​ 7 ರಂದು ವಿಚಾರಣೆ ಕೈಗೆತ್ತಿಕೊಂಡಿತು. ಸೆ. 16 ರಂದು ಅಪರಾಧಿಯ ಆರೋಪಗಳನ್ನು ಮಂಡಿಸಲಾಯಿತು. ನಂತರ ಅಕ್ಟೋಬರ್​ 4ರಂದು ವಿಚಾರಣೆ ಆರಂಭವಾಗಿ ನವೆಂಬರ್​ 4 ರಂದು ಆರೋಪಿಯನ್ನು ಅಪರಾಧಿ ಎಂದು ಶಿಕ್ಷೆ ವಿಧಿಸಿತ್ತು. ಇಂದು ಅಪರಾಧಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣ ಪ್ರಕಟಿಸಿ ಮರಣ ದಂಡನೆ ಘೋಷಿಸಿದೆ. ಈ ಮೂಲಕ ಮೃತಪಟ್ಟ ಬಾಲಕಿಗೆ ನ್ಯಾಯಾಲಯ ಮಕ್ಕಳ ದಿನಾಚರಣೆ ದಿನದಂತೆ ಮಹತ್ತರ ನ್ಯಾಯ ಒದಗಿಸಿದೆ.

ಶಿಕ್ಷೆಯ ಪ್ರಮಾಣ ಹೀಗಿದೆ: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಒಟ್ಟು 5 ಸೆಕ್ಷನ್​ಗಳ ಅಡಿ ಅಪರಾಧಿಗೆ ಶಿಕ್ಷೆಗಳನ್ನು ವಿಧಿಸಲಾಗಿದೆ. ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ 5 ವರ್ಷ ಶಿಕ್ಷೆ, ಮಾದಕ ವಸ್ತು ಸೇವನೆಗೆ 3 ವರ್ಷ ಶಿಕ್ಷೆ, ಬಾಲಕಿ ಮೇಲಿನ ಅತ್ಯಾಚಾರ, ಕ್ರೂರ ಕೊಲೆಗಾಗಿ ಜೀವಾವಧಿ ಮತ್ತು ಮರಣದಂಡನ ಶಿಕ್ಷೆ ವಿಧಿಸಲಾಗಿದೆ. ಈ ಎಲ್ಲ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿದೆ. ಅಲ್ಲದೇ ಅಪರಾಧಿಗೆ ನ್ಯಾಯಾಲಯ 7 ಲಕ್ಷದ 70 ಸಾವಿರ ರೂ. ಹಣದ ದಂಡ ವಿಧಿಸಿದೆ.

ಇದನ್ನೂ ಓದಿ:ಬೋರ್​ವೆಲ್​ಗೆ ಬಿದ್ದ ವೃದ್ಧೆ; ಭೂಮಿ ಕೊರೆದು ರಕ್ಷಿಸಿದ್ರೂ ಬದುಕುಳಿಯದ ಅಜ್ಜಿ

ABOUT THE AUTHOR

...view details