ಕರ್ನಾಟಕ

karnataka

By

Published : Nov 18, 2022, 1:59 PM IST

Updated : Nov 18, 2022, 2:05 PM IST

ETV Bharat / bharat

ಡಚ್​ ನಾಡಿನಲ್ಲಿ ದೋಸೆ ಹಿಟ್ಟು ಉದ್ಯಮ ಆರಂಭಿಸಿ ಹಿಟ್​ ಆದ ಕೇರಳದ ದಂಪತಿ

ಕೆಲಸ ಕೇಳಿಕೊಂಡು ನೆದರ್​ಲ್ಯಾಂಡ್ಸ್​ಗೆ ತೆರಳಿದ್ದ ಕೇರಳದ ದಂಪತಿ ಅಲ್ಲಿಯೇ ಮದರ್ಸ್​ ಕಿಚನ್ ಎಂಬ ದೋಸೆ ಹಿಟ್ಟು ರುಬ್ಬುವ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ.

kerala-couples-dosa-and-idli-batter
ಡಚ್​ ನಾಡಿನಲ್ಲಿ ದೋಸೆ ಹಿಟ್ಟು ಉದ್ಯಮ

ಎರ್ನಾಕುಲಂ(ಕೇರಳ):ಜೀವನ ಅರಸಿ ನೆದರ್​ಲ್ಯಾಂಡ್ಸ್​ಗೆ ತೆರಳಿದ್ದ ಕೇರಳದ ದಂಪತಿ ಅಲ್ಲಿರುವ ಕೊರತೆಯನ್ನೇ ಬಳಸಿಕೊಂಡು ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ. ಕೆಲಸ ಕೇಳಿ ಹೋಗಿದ್ದ ಅವರೇ ಇಂದು ಹಲವರಿಗೆ ಉದ್ಯೋಗದಾತರಾಗಿದ್ದಾರೆ.

ಹೌದು, ಕೇರಳದ ರಮ್ಯಾ ಮತ್ತು ನವೀನ್​ ಎಂಜಿನಿಯರ್​ ದಂಪತಿ 11 ವರ್ಷಗಳ ಹಿಂದೆ ನೆದರ್​ಲ್ಯಾಂಡ್ಸ್​ಗೆ ತೆರಳಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಅಲ್ಲಿನ ಆಹಾರ ಪದ್ಧತಿ ಒಗ್ಗಿರಲಿಲ್ಲ. ದಕ್ಷಿಣ ಭಾರತದಲ್ಲಿ ಫೇಮಸ್​ ತಿಂಡಿಯಾದ ಇಡ್ಲಿ, ಗರಿಗರಿ ದೋಸೆ ದಂಪತಿ ಉಳಿದುಕೊಂಡಿದ್ದ ಪ್ರದೇಶದಲ್ಲಿ ಲಭ್ಯವಿರಲಿಲ್ಲ.

ಡಚ್​​ ನಾಡಿನಲ್ಲಿ ಭಾರತದ ರುಚಿಕರ ತಿಂಡಿ ಅಲಭ್ಯತೆಯನ್ನು ಅರಿತ ರಮ್ಯಾ ಅವರು ತಾವೇ ಉದ್ಯಮವನ್ನು ಆರಂಭಿಸುವ ಐಡಿಯಾ ಮಾಡಿದ್ದಾರೆ. ಅದರಂತೆ "ಮದರ್ಸ್​ ಕಿಚನ್​" ಎಂಬ ಸಣ್ಣ ಕಂಪನಿ ಆರಂಭಿಸಿದರು. ಆರಂಭದಲ್ಲಿ 10 ಕೆಜಿ ದೋಸೆ ಹಿಟ್ಟನ್ನು ರುಬ್ಬಿ ಅಲ್ಲಿನ ಹೋಟೆಲ್​ಗಳಿಗೆ ನೀಡಿದರು.

ಬಳಿಕ ಬೇಡಿಕೆಗೆ ಅನುಗುಣವಾಗಿ ಈ ಪ್ರಮಾಣವನ್ನು ಹೆಚ್ಚಿಸುತ್ತಾ ಸಾಗಿ ಈಗ 500 ಕೆಜಿ ಹಿಟ್ಟು ರುಬ್ಬಿ ಸೂಪರ್​ಮಾರ್ಕೆಟ್​ಗಳಿಗೂ ಅದನ್ನು ಮಾರಾಟ ಮಾಡುತ್ತಿದ್ದಾರೆ. ಮೊದಲು ದಂಪತಿ ಮಾತ್ರವೇ ಆರಂಭಿಸಿದ್ದ ಕಂಪನಿ ಇದೀಗ ದೊಡ್ಡದಾಗಿ ಬೆಳೆದು ಹಲವು ಜನರಿಗೆ ಉದ್ಯೋಗ ನೀಡಿದೆ. ರುಬ್ಬಿದ ಹಿಟ್ಟಿಗಾಗಿ ಹೆಚ್ಚಿನ ಪ್ರಮಾಣದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ದೊಡ್ಡ ಯಂತ್ರಗಳನ್ನು ಖರೀದಿಸಿದ್ದಾರೆ.

ಎಂಜಿನಿಯರ್​ ಕೆಲಸ ತೊರೆದ ದಂಪತಿ:ಎಂಜಿನಿಯರ್​ ಆಗಿದ್ದ ರಮ್ಯಾ ಮತ್ತು ನವೀನ್​ ಅವರು ತಮ್ಮ ಈ ಉದ್ಯಮಕ್ಕಾಗಿ ಕೆಲಸವನ್ನೇ ತೊರೆದರು. ಮೊದ ಮೊದಲು ರಮ್ಯಾ ಅವರು ಮಾತ್ರ ಇದನ್ನು ನಡೆಸಿಕೊಂಡು ಹೋಗುತ್ತಿದ್ದರು. ಉದ್ಯಮ ವಿಸ್ತರಣೆಗೊಂಡ ಬಳಿಕ ನವೀನ್​ ಅವರೂ ಕೂಡ ಕೆಲಸ ತೊರೆದು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ಡಚ್​ ದೇಶದಲ್ಲಿ ಆರಂಭಿಸಿದ ಈ ಉದ್ಯಮವನ್ನು ದಂಪತಿ ಕೇರಳದಲ್ಲೂ ಮುಂದುವರಿಸಲು ಯೋಚಿಸಿದ್ದಾಗಿ ತಿಳಿಸಿದ್ದಾರೆ.

ಓದಿ:ರೋಬೋಗಳಿಂದ ಈ ಪಕ್ಷದ ಅಭ್ಯರ್ಥಿಯಿಂದ ಮತಯಾಚನೆ.. ಗುಜರಾತ್​ ಚುನಾವಣೆಯಲ್ಲಿ ತಂತ್ರಜ್ಞಾನ ಬಳಕೆ

Last Updated : Nov 18, 2022, 2:05 PM IST

ABOUT THE AUTHOR

...view details