ಕರ್ನಾಟಕ

karnataka

ETV Bharat / bharat

ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಕಳ್ಳತನ.. ಸಬ್​​ ಇನ್ಸ್​​​ಪೆಕ್ಟರ್​ ಅಮಾನತು - ಮೃತ ವ್ಯಕ್ತಿಯ ಮೊಬೈಲ್ ಕಳ್ಳತನ

ರೈಲು ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯೋರ್ವನ ಮೊಬೈಲ್​ ಕಳ್ಳತನ ಮಾಡಿ, ಅದರ ಬಳಕೆ ಮಾಡ್ತಿದ್ದ ಸಬ್​​ ಇನ್ಸ್​ಪೆಕ್ಟರ್​ ಇದೀಗ ಅಮಾನತುಗೊಂಡಿದ್ದಾರೆ.

SI
SI

By

Published : Oct 9, 2021, 8:08 PM IST

ತಿರುವನಂತಪುರಂ(ಕೇರಳ): ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್ ಕಳ್ಳತನ ಮಾಡಿ,​ ಬಳಕೆ ಮಾಡಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಬ್​​ಇನ್ಸ್​ಪೆಕ್ಟರ್​ ಅಮಾನತುಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಚತನ್ನೂರು ಸಬ್​ ಇನ್ಸ್​​ಪೆಕ್ಟರ್​​ ಜ್ಯೋತಿ ಸುಧಾಕರ್​, ಇತ್ತೀಚೆಗೆ ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಫೋನ್​ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ಅವರ ವಿಚಾರಣೆ ನಡೆಸಿದ ಬಳಿಕ ಅಮಾನತುಗೊಳಿಸಲಾಗಿದೆ. ಮಂಗಳಾಪುರಂ ಪೊಲೀಸ್​ ಠಾಣೆಯಲ್ಲಿ ಸಬ್​​ಇನ್ಸ್​​ಪೆಕ್ಟರ್​​​ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಮೊಬೈಲ್​​ ಫೋನ್​ ಪಡೆದುಕೊಂಡಿದ್ದರು.

ಅಪಘಾತಕ್ಕೀಡಾಗಿ ಸಾವನ್ನಪ್ಪಿದ ವ್ಯಕ್ತಿಯ ಸಂಬಂಧಿಕರು ಮೊಬೈಲ್​ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಸೈಬರ್​ ಕ್ರೈಂ ವಿಭಾಗ ಐಎಂಇಐ ಸಂಖ್ಯೆಯೊಂದಿಗೆ ತನಿಖೆ ನಡೆಸಿತ್ತು. ಈ ವೇಳೆ, ಸಬ್​ ಇನ್ಸ್​​ಪೆಕ್ಟರ್​​ ಜ್ಯೋತಿ ಸುಧಾಕರ್ ಈ ಫೋನ್​​ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ದುಬಾರಿ ಬೆಲೆಯ ಫೋನ್​ ಇದಾಗಿದ್ದ ಕಾರಣ ಸಬ್​ ಇನ್ಸ್​​ಪೆಕ್ಟರ್ ಬಳಕೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿರಿ:ತಿಮ್ಮಪ್ಪನ ಭಕ್ತರಿಗಾಗಿ ವಿಶೇಷ ಆ್ಯಪ್​ ವಿನ್ಯಾಸ: ರಿಲಯನ್ಸ್​​​ ಜಿಯೋ ಜತೆ TTD ಒಪ್ಪಂದ

ಜೂನ್​​ 18ರಂದು ಕನಿಯಪುರಂ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ಸಿಲುಕಿದ್ದ ವ್ಯಕ್ತಿ ಅರುಣ್​​ ಕುಮಾರ್​​​ ಸಾವನ್ನಪ್ಪಿದ್ದನು. ಈ ವೇಳೆ, ಅವರ ಮೊಬೈಲ್​​ನ ಜ್ಯೋತಿ ಕುಮಾರ್​ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಇದೀಗ ತನಿಖಾ ತಂಡದ ವರದಿ ಆಧಾರದ ಮೇಲೆ ಎಸ್​ಐ ಅಮಾನತುಗೊಳಿಸಿ ಆದೇಶಿಸಲಾಗಿದೆ.

ABOUT THE AUTHOR

...view details