ತಿರುವನಂತಪುರಂ(ಕೇರಳ) :ಕೇರಳದ ತಿರುವನಂತಪುರಂನ ಕಟ್ಟಡ ಕಾರ್ಮಿಕನ ಮಗಳೊಬ್ಬಳು ಯುಪಿಎಸ್‌ಸಿಯ ಕಠಿಣ ಪರೀಕ್ಷೆಯಲ್ಲಿ ಪಾಸ್ ಆಗಿ ಅನೇಕ ಬಡ ಮಕ್ಕಳಿಗೆ ಮಾದರಿಯಾಗಿದ್ದಾರೆ.
ಮೂಲತಃ ಕಟ್ಟಡ ಕಾರ್ಮಿಕನ ಮಗಳಾಗಿರುವ ಅಶ್ವತಿ ಅವರು 2020ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 481ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಕಳೆದ 15 ವರ್ಷಗಳಿಂದ ನಾಗರಿಕ ಸೇವೆ ಪರೀಕ್ಷೆ ಪಾಸ್ ಆಗಬೇಕು ಎಂಬ ಕನಸು ಇದೀಗ ನನಸಾಗಿದೆ. ಐಎಎಸ್ ಅಧಿಕಾರಿಯಾಗಬೇಕು ಎಂಬುದು ನನ್ನ ಕನಸಾಗಿತ್ತು ಎಂದಿದ್ದಾರೆ.
ಇದನ್ನೂ ಓದಿರಿ:ಮನಸೊಂದಿದ್ದರೆ ಮಾರ್ಗ.. ಮಾತನಾಡಲು, ಕೇಳಲು ಸಾಧ್ಯವಿಲ್ಲದ ಅಭ್ಯರ್ಥಿ UPSC ಪರೀಕ್ಷೆ ಪಾಸ್
ನಾಲ್ಕನೇ ಪ್ರಯತ್ನದಲ್ಲಿ ಅಶ್ವತಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಪಾಸ್ ಮಾಡಿದ್ದಾರೆ. ಹಿಂದಿನ ಮೂರು ಸಲ ನಾನು ಬರೆದ ಪ್ರಿಲಿಮ್ಸ್ ಕೂಡ ಪಾಸ್ ಆಗಿರಲಿಲ್ಲ ಎಂದಿದ್ದಾರೆ. ಇದೀಗ ಪರೀಕ್ಷೆ ಹಾಗೂ ಸಂದರ್ಶನ ಪಾಸ್ ಮಾಡಿರುವುದು ತುಂಬಾ ಖುಷಿ ನೀಡಿದೆ ಎಂದು ತಿಳಿಸಿದ್ದಾರೆ.
ಅಶ್ವತಿ ಸಾಧನೆ ಬಗ್ಗೆ ಮಾತನಾಡಿರುವ ಪ್ರೇಮ್‌ಕುಮಾರ್, ಮಗಳ ಸಾಧನೆಯಿಂದಾಗಿ ನಾನು ತುಂಬಾ ಸಂತೋಷಗೊಂಡಿದ್ದೇನೆ. ಶಾಲಾ ದಿನಗಳಲ್ಲಿ ಆಕೆ ತುಂಬಾ ಜಾಣ ವಿದ್ಯಾರ್ಥಿನಿ ಆಗಿದ್ದಳು ಎಂದು ತಿಳಿಸಿದ್ದಾರೆ. 2020ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಒಟ್ಟು 761 ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ ಬಿಹಾರದ ಶುಭಂ ಕುಮಾರ್ ಮೊದಲ ಸ್ಥಾನಗಳಿಸಿದ್ದಾರೆ.