ತಿರುವನಂತಪುರಂ(ಕೇರಳ): ನೆರೆಯ ಕೇರಳ ರಾಜ್ಯ ಗಡಿ ಪ್ರದೇಶಗಳಲ್ಲಿನ ಕೆಲವೊಂದು ಗ್ರಾಮಗಳ ಹೆಸರು ಮರುನಾಮರಣ ಮಾಡಲಿದೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಖುದ್ದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟನೆ ನೀಡಿದ್ದಾರೆ.
ಕೇರಳ ಸರ್ಕಾರ ರಾಜ್ಯದ ಯಾವುದೇ ಸ್ಥಳದ ಹೆಸರು ಬದಲಾವಣೆ ಮಾಡಲು ಯೋಚನೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸುವ ಮೂಲಕ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ನೆರೆಯ ಕೇರಳ ರಾಜ್ಯವು ತನ್ನ ಗಡಿ ಪ್ರದೇಶಗಳಲ್ಲಿನ ಕೆಲವು ಗ್ರಾಮಗಳನ್ನು ಮರುನಾಮಕರಣ ಮಾಡುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿತ್ತು.
ಪ್ರಮುಖವಾಗಿ ಕಾಸರಗೋಡಿನ ಗಡಿ ಜಿಲ್ಲೆಯಲ್ಲಿನ ಗ್ರಾಮಗಳನ್ನ ಮಲಯಾಳಿಯ ಕೆಲವೊಂದು ಹೆಸರು ಮರುನಾಮಕರಣ ಮಾಡುವ ಉಹಾಪೋಹ ಎಂದಿತ್ತು. ತಿರುವನಂತಪುರಂನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ, ಕೇರಳ ಸರ್ಕಾರ ಯಾವುದೇ ಸ್ಥಳದ ಹೆಸರು ಬದಲಾವಣೆ ಮಾಡಲು ನಿರ್ಧರಿಸಿಲ್ಲ. ಇದರ ಹಿಂದೆ ಏನಾದರೂ ಪಿತೂರಿ ಇದೆಯೇ ಎಂದು ಪರಿಶೀಲಿಸಬೇಕಾಗಿದೆ. ಯಾವುದೇ ವರದಿ ಪ್ರಕಟಗೊಳ್ಳುವ ಮೊದಲು ಸತ್ಯಾಸತ್ಯತೆ ತಿಳಿದುಕೊಳ್ಳಬೇಕು ಎಂದಿದ್ದಾರೆ.