ಕರ್ನಾಟಕ

karnataka

ETV Bharat / bharat

ಮುಲ್ಲ ಪೆರಿಯಾರ್ ಅಣೆಕಟ್ಟು ವಿಚಾರ.. ಅನಗತ್ಯ ಆತಂಕ ಉಂಟುಮಾಡುವವರ ವಿರುದ್ಧ ಕ್ರಮ: ಕೇರಳ ಸಿಎಂ ಎಚ್ಚರಿಕೆ - Actor Prithviraj

ಮುಲ್ಲಪೆರಿಯಾರ್ ಡ್ಯಾಂ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅನಗತ್ಯವಾಗಿ ಈ ಡ್ಯಾಂ ಕುರಿತು ಆತಂಕ ಸೃಷ್ಟಿ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಕೇರಳ ಸಿಎಂ ಎಚ್ಚರಿಕೆ ನೀಡಿದ್ದಾರೆ.

kerala cm pinarayi vijayan reaction on Mullaiperiyar dam issue
ಕೇರಳ ಸಿಎಂ

By

Published : Oct 25, 2021, 5:54 PM IST

ತಿರುವನಂತಪುರ: ಮುಲ್ಲಪೆರಿಯಾರ್ ಡ್ಯಾಂ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ವಿಧಾನಸಭೆಗೆ ತಿಳಿಸಿದರು. ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅನಗತ್ಯವಾಗಿ ಈ ಅಣೆಕಟ್ಟು ಕುರಿತು ಭಯ ಉಂಟುಮಾಡುವವವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಫ್ರಾನ್ಸ್, ಕೆನಡಾ, ಭಾರತ, ಜಪಾನ್, ಜಾಂಬಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಜಿಂಬಾಬ್ವೆಯ ಅಣೆಕಟ್ಟುಗಳ ನಿಷ್ಕ್ರಿಯಗೊಳಿಸುವಿಕೆ ಮತ್ತು ಅವುಗಳಿಗೆ ವಯಸ್ಸಾದ ಬಗ್ಗೆ ಅಧ್ಯಯನ ನಡೆಸಿದ ನಂತರ ಪ್ರಕಟಿಸಲಾದ 'ಏಜಿಂಗ್ ವಾಟರ್ ಸ್ಟೋರೇಜ್ ಇನ್ಫ್ರಾಸ್ಟ್ರಕ್ಚರ್: ಆನ್ ಎಮರ್ಜಿಂಗ್ ಗ್ಲೋಬಲ್ ರಿಸ್ಕ್' ( 'Ageing Water Storage Infrastructure: An Emerging Global Risk', ) ಯುಎನ್ ವಿಶ್ವವಿದ್ಯಾಲಯದ ವರದಿಯು,126 ವರ್ಷಗಳಷ್ಟು ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟೆಗೆ ಅಪಾಯದ ಸಾಧ್ಯತೆಯಿದೆ ಎಚ್ಚರಿಕೆ ನೀಡಿದೆ.

ಆದರೆ, ಮುಲ್ಲಪೆರಿಯಾರ್ ಡ್ಯಾಂ ಬಗ್ಗೆ ಯಾವುದೇ ಆತಂಕ ಅಗತ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ವಿಧಾನಸಭೆಗೆ ತಿಳಿಸಿದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅನಗತ್ಯವಾಗಿ ಈ ಡ್ಯಾಂ ಕುರಿತು ಭಯ ಉಂಟುಮಾಡುವವವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಹೊಸ ಅಣೆಕಟ್ಟೆ ನಿರ್ಮಾಣ ಕುರಿತು ಚರ್ಚೆ

ಮುಲ್ಲಪೆರಿಯಾರ್ ಅಣೆಕಟ್ಟೆಯನ್ನು ನಿಷ್ಕ್ರಿಯಗೊಳಿಸುವಿಕೆ ಮತ್ತು ಹೊಸ ಅಣೆಕಟ್ಟು ನಿರ್ಮಾಣದ ಬೇಡಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ನಟ ಪೃಥ್ವಿರಾಜ್ ಅವರು ತಮ್ಮ ಫೇಸ್‌ಬುಕ್ ಪೋಸ್ಟ್ ಮೂಲಕ, ಹಲವಾರು ದಶಕಗಳ ಕಾಲ ಬಳಸಿದ ಅಣೆಕಟ್ಟನ್ನು ನಾಶ ಮಾಡಿ ಹೊಸ ಅಣೆಕಟ್ಟು ನಿರ್ಮಾಣ ಮಾಡುವ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಪ್ರತಿಪಕ್ಷದಿಂದ ವಿಷಯ ಪ್ರಸ್ತಾಪ

ಸೋಮವಾರ ಕೇರಳ ವಿಧಾನಸಭೆಯಲ್ಲಿ, ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಕೂಡ ಈ ವಿಷಯವನ್ನು ಪ್ರಸ್ತಾಪಿಸಿ ಅಣೆಕಟ್ಟೆಯ ಅಪಾಯದ ಬಗೆಗಿನ ಜನರ ಭಯವನ್ನು ಸರ್ಕಾರ ನಿವಾರಿಸಬೇಕೆಂದು ಹೇಳಿದರು. ಆತಂಕದಲ್ಲಿರುವ ಜನರನ್ನು ಸಮಾಧಾನಪಡಿಸಲು ಸರ್ಕಾರವು ಉತ್ತರವನ್ನು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಮಾಜಿ ವಿದ್ಯುತ್ ಸಚಿವ ಎಂಎಂ ಮಣಿ 100 ವರ್ಷಗಳಿಗೂ ಹೆಚ್ಚು ಹಳೆಯದಾದ ಅಣೆಕಟ್ಟಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಅಣೆಕಟ್ಟೆಗೆ ಏನಾದರೂ ಸಂಭವಿಸಿದರೆ, ಇಡುಕ್ಕಿ ಮತ್ತು ಎರ್ನಾಕುಲಂಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಮಣಿ ಕಳವಳ ವ್ಯಕ್ತಪಡಿಸಿದ್ದಾರೆ.

ಆದರೆ, ಮುಖ್ಯಮಂತ್ರಿ, ಯುಎನ್ ವಿಶ್ವವಿದ್ಯಾಲಯದ ವರದಿಯ ಬಗ್ಗೆ ಏನೂ ಉಲ್ಲೇಖಿಸದೇ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಎಲ್ಲ ಕಳವಳಗಳು ಜನರಲ್ಲಿ ಭಯವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ಕೇರಳವು ಹೊಸ ಅಣೆಕಟ್ಟೆ ನಿರ್ಮಾಣದ ಬಗ್ಗೆ ಮಾತನಾಡುತ್ತದೆ ಆದರೆ, ಈ ಅಣೆಕಟ್ಟು ತಮಿಳುನಾಡು ಸರ್ಕಾರದ ನಿಯಂತ್ರಣದಲ್ಲಿದ್ದು, ತಮಿಳುನಾಡು ಮತ್ತು ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿದೆ.

ವರದಿಯಲ್ಲಿ ಏನಿದೆ?

ಮುಲ್ಲಪೆರಿಯಾರ್ ಅಣೆಕಟ್ಟಿನ ಕುರಿತಾದ ತನ್ನ ವರದಿಯಲ್ಲಿ ಭೂಕಂಪನ ಸಕ್ರಿಯವಾಗಿರುವ (ಭೂಕಂಪ-ಪೀಡಿತ) ಅಣೆಕಟ್ಟು ಗಮನಾರ್ಹವಾದ ರಚನಾತ್ಮಕ ದೋಷಗಳನ್ನು ತೋರಿಸುತ್ತದೆ ಮತ್ತು ವೈಫಲ್ಯದ ಅಪಾಯವನ್ನು ಹೊಂದಿರಬಹುದು ಎಂದು ಹೇಳಿದೆ. 1979 ರಲ್ಲಿ ಸಣ್ಣ ಭೂಕಂಪನವು ಅಣೆಕಟ್ಟಿನಲ್ಲಿ ಬಿರುಕುಗಳನ್ನು ಉಂಟುಮಾಡಿತು ಮತ್ತು ಭೂಕಂಪನದಿಂದಾಗಿ ಅಣೆಕಟ್ಟಿನಲ್ಲಿ ಹೆಚ್ಚಿನ ಬಿರುಕುಗಳು ಕಾಣಿಸಿಕೊಂಡವು ಎಂದು ವರದಿ ಹೇಳಿದೆ.

ಈ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಹಳೆಯ ವಿಧಾನಗಳು ಮತ್ತು ವಸ್ತುಗಳನ್ನು ಬಳಸಿ ನಿರ್ಮಾಣ ಮಾಡಿರುವುದರಿಂದ ಅಣೆಕಟ್ಟಿನಲ್ಲಿ ಸೋರಿಕೆ ಸಂಭವಿಸಬಹುದು ಎಂದು ವರದಿ ಹೇಳಿದೆ. ಬ್ರಿಟಿಷ್ ಸರ್ಕಾರವು 1895 ರಲ್ಲಿ ನಿರ್ಮಿಸಿದ ಅಣೆಕಟ್ಟೆಯು 50 ವರ್ಷಗಳ ಉದ್ದೇಶಿತ ಜೀವಿತಾವಧಿಯನ್ನು ಹೊಂದಿತ್ತು. ಆದರೆ, 100 ವರ್ಷಗಳು ಕಳೆದರೂ ಇನ್ನು ಇದೇ ಅಣೆಕಟ್ಟೆ ಮುಂದುವರಿದಿದೆ ಎಂದು ವರದಿ ಹೇಳಿದೆ.

ABOUT THE AUTHOR

...view details