ಕರ್ನಾಟಕ

karnataka

ETV Bharat / bharat

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಸಿಎಂ ಭಾಗಿಯಾಗಿರಬಹುದು: ಕೇಂದ್ರ ಸಚಿವ ವಿ ಮುರಳೀಧರನ್ - Union Minister of State for External Affairs V Muraleedharan on Sunday alleged that BJP has grave suspicions and concerns that Kerala Chief Minister Pinarayi Vijayan

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗುಣಲಕ್ಷಣಗಳ ಆಧಾರದ ಮೇಲೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಕೇಂದ್ರ ಸಚಿವರು ಶಂಕಿಸಿದ್ದಾರೆ.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಸಿಎಂ ಭಾಗಿಯಾಗಿರಬಹುದು: ಕೇಂದ್ರ ಸಚಿವ ವಿ ಮುರಳೀಧರನ್
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಸಿಎಂ ಭಾಗಿಯಾಗಿರಬಹುದು: ಕೇಂದ್ರ ಸಚಿವ ವಿ ಮುರಳೀಧರನ್

By

Published : Jun 19, 2022, 7:33 PM IST

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗುಣಲಕ್ಷಣಗಳ ಆಧಾರದ ಮೇಲೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂಬ ಗಂಭೀರ ಅನುಮಾನ ಮತ್ತು ಕಳವಳ ಬಿಜೆಪಿಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಆರೋಪಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಕಳ್ಳಸಾಗಣಿಕೆ ಪ್ರಕರಣದಲ್ಲಿ ವಿಜಯನ್ ಅವರ ಕೈವಾಡವಿದೆ ಎಂದು ಹೇಳಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಹೇಳಿದ್ದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಅಧೀನದಲ್ಲಿರುವ ಎಡ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆಯು ಯುಎಇ ಕಾನ್ಸುಲ್ ಉದ್ಯೋಗಿಗಳಿಗೆ ಕಾನೂನುಬಾಹಿರವಾಗಿ ರಾಜತಾಂತ್ರಿಕ ಗುರುತನ್ನು ನೀಡಿರುವ ಅಂಶವನ್ನು ಗಮನಿಸಿದರೆ ಈ ಆರೋಪದಲ್ಲಿ ನಂಬಿಕೆ ಇದೆ ಎನ್ನಬಹುದು ಎಂದು ಅವರು ಹೇಳಿದ್ದಾರೆ.

ಕಾನ್ಸುಲ್ ನೌಕರರೊಂದಿಗೆ ಸಿಎಂ ಹೊಂದಿರುವ ಆ ರೀತಿಯ ಸಂಬಂಧವು ಇತರ ರಾಜ್ಯಗಳಲ್ಲಿ ಇಲ್ಲ. ಇಲ್ಲಿನ ಯುಎಇ ಕಾನ್ಸುಲೇಟ್‌ನ ಉದ್ಯೋಗಿಗಳೊಂದಿಗೆ ಅಂತಹ ಸಂಪರ್ಕಗಳ ಅಗತ್ಯವೇನೆಂದು ಪ್ರಶ್ನಿಸಿದರು.

ಕೇರಳ ಪೊಲೀಸರು ಮತ್ತು ಅದರ ಕ್ರೈಂ ಬ್ರಾಂಚ್ ಅಸಮರ್ಥರೆಂದು ನಾನೂ ಹೇಳುವುದಿಲ್ಲವಾದರೂ ಸಹ ರಾಜಕೀಯ ಹಸ್ತಕ್ಷೇಪದಿಂದಾಗಿ ಅವರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ನರೇಂದ್ರ ಮೋದಿ ಪ್ರಧಾನಿಯಾಗಿರುವವರೆಗೆ ಕಳ್ಳಸಾಗಣಿಕೆ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿರುವ ಯಾರೊಬ್ಬರೂ ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸಿಎಂ ಅವರು ಮುಂದೆ ಬಂದು ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ : ಆರೋಪಿ ರೇಖಿ ವೈದ್ಯನಿಗೆ ಜೈಲಿನಲ್ಲಿ ಥಳಿತ, ಸ್ಥಳಾಂತರ

For All Latest Updates

TAGGED:

ABOUT THE AUTHOR

...view details