ಕರ್ನಾಟಕ

karnataka

ETV Bharat / bharat

ಧರ್ಮದಂ ಕೇತ್ರದಿಂದ ನಾಮಪತ್ರ ಸಲ್ಲಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್ - ನಾಮಪತ್ರ ಸಲ್ಲಿಕೆ ಮಾಡಿದ ಕೇರಳ ಸಿಎಂ ಪಿಣರಾಯಿ

ಕೇರಳ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಇಂದು ನಾಮಪತ್ರ ಸಲ್ಲಿಸಿದರು.

Kerala Chief Minister
Kerala Chief Minister

By

Published : Mar 15, 2021, 3:22 PM IST

ಕಣ್ಣೂರು(ಕೇರಳ): ಕೇರಳ ವಿಧಾನಸಭೆಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್​ 6ರಂದು ಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಕೆ ಮಾಡಿದ ಕೇರಳ ಸಿಎಂ

ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಣ್ಣೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು ನಾಮಪತ್ರ ಸಲ್ಲಿಸಿದರು. ಧರ್ಮದಂ ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ: ಎಂಎಲ್​ಸಿ ಮತದಾರರ ಪಟ್ಟಿಯಲ್ಲಿ ಪಿಎಂ ಮೋದಿ ಫೋಟೊ!

ಈ ಹಿಂದೆ ಇದೇ ಕ್ಷೇತ್ರದಿಂದ ಅಖಾಡಕ್ಕಿಳಿದು ಗೆಲುವು ಸಾಧಿಸಿದ್ದ ಪಿಣರಾಯಿ ಮತ್ತೊಮ್ಮೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್​ನಿಂದ ಉಮ್ಮನ್​ ಚಾಂಡಿ ಸಿಎಂ ಅಭ್ಯರ್ಥಿಯಾಗಿ ಪುತುಪ್ಪಲ್ಲಿಯಿಂದ ಸ್ಪರ್ಧೆ ಮಾಡಿದ್ದು, ಬಿಜೆಪಿಯಿಂದ ಮೆಟ್ರೋಮ್ಯಾನ್​​ ಖ್ಯಾತಿಯ ಶ್ರೀಧರನ್ ಪಾಲಕ್ಕಾಡ್​​ನಿಂದ​​ ಸ್ಪರ್ಧಿಸುತ್ತಿದ್ದಾರೆ.

ABOUT THE AUTHOR

...view details