ತಿರುವನಂತಪುರಂ (ಕೇರಳ): ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಡೆದ ಮತದಾನದ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ. ಮತ ಎಣಿಕೆ ಆರಂಭವಾಗುತ್ತಿದ್ದಂತೆ ಇತ್ತ ವಿವಿಧ ಪಕ್ಷಗಳ ಅಭ್ಯರ್ಥಿಗಳು ಫಲಿತಾಂಶಕ್ಕೆ ಕಾದು ಕುಳಿತಿದ್ದಾರೆ.
ಕೇರಳದಲ್ಲಿ ಕಾವೇರಿದ ಮತ ಎಣಿಕೆ: ಆಡಳಿತಾರೂಢ ಎಲ್‌ಡಿಎಫ್ ಮುನ್ನಡೆ, ಬಿಜೆಪಿಗೂ ಸಿಹಿಸುದ್ದಿ
ಮುಂದಿನ ವರ್ಷ ನಡೆಯುವ ಕೇರಳ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಹೆಜ್ಜೆ ಇಡಲು ಬಿಜೆಪಿ ಪ್ರಯತ್ನಿಸುತ್ತಿದೆ.
ಕಾರ್ಯಕರ್ತರಿಂದ ಸಂಭ್ರಮಾಚರಣೆ
ಇದೇ ವೇಳೆ ಸ್ಥಳೀಯ ಸಂಸ್ಥೆಗಳ ಈ ಚುನಾವಣೆಯಲ್ಲಿ ಬಿಜೆಪಿ ತಕ್ಕಮಟ್ಟಿಗೆ ಅರಳುವ ಮೂನ್ಸೂಚನೆ ನೀಡಿದೆ. ಸ್ಥಳೀಯ ಸಂಸ್ಥೆಗಳ 13 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ತಿರುವನಂತಪುರಂ ಕಾರ್ಪೊರೇಶನ್‌ನ 100 ವಾರ್ಡ್‌ಗಳ ಪೈಕಿ 7 ವಾರ್ಡ್‌ಗಳಲ್ಲಿ ಆಡಳಿತಾರೂಢ ಎಲ್‌ಡಿಎಫ್ ಜಯ ಸಾಧಿಸಿದರೆ, ಎನ್‌ಡಿಎ -3 ಮತ್ತು ಯುಡಿಎಫ್ -1 ರಲ್ಲಿ ವಿಜಯ ಸಾಧಿಸಿವೆ.
- 945 ಗ್ರಾಮ ಪಂಚಾಯಿತಿಗಳಲ್ಲಿ ಎಲ್‌ಡಿಎಫ್ 486 ರಲ್ಲಿ ಮುನ್ನಡೆ ಸಾಧಿಸಿದೆ. ಹಾಗೆಯೇ ಯುಡಿಎಫ್ 380 ರಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಡಿಎ 23 ಗ್ರಾ.ಪಂ.ಯಲ್ಲಿ ಮುನ್ನಡೆ ಸಾಧಿಸಿದೆ.
- 152 ಬ್ಲಾಕ್ ಪಂಚಾಯಿತಿಗಳಲ್ಲಿ ಎಲ್‌ಡಿಎಫ್- 103, ಯುಡಿಎಫ್-48, ಎನ್‌ಡಿಎ-1 ರಲ್ಲಿ ಮುನ್ನಡೆ ಸಾಧಿಸಿವೆ.
- 14 ಜಿಲ್ಲಾ ಪಂಚಾಯಿತಿಗಳಲ್ಲಿ ಎಲ್‌ಡಿಎಫ್- 10, ಯುಡಿಎಫ್-4, ಎನ್‌ಡಿಎ-0 ರಲ್ಲಿ ಮುನ್ನಡೆ ಸಾಧಿಸಿವೆ.
- 86 ಪುರಸಭೆಗಳಲ್ಲಿ ಎಲ್‌ಡಿಎಫ್- 41, ಯುಡಿಎಫ್-39, ಎನ್‌ಡಿಎ-4 ರಲ್ಲಿ ಮುನ್ನಡೆ ಸಾಧಿಸಿದರೆ, ಇತರೆ 4 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.