ತಿರುವನಂತಪುರಂ (ಕೇರಳ) : ಸ್ವಂತ ಅಂತರ್ಜಾಲ ಸೇವೆಯನ್ನು ಹೊಂದಿರುವ ದೇಶದ ಮೊದಲ ಮತ್ತು ಏಕೈಕ ರಾಜ್ಯ ಕೇರಳವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಪಿ ವಿಜಯನ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ ದೂರಸಂಪರ್ಕ ಇಲಾಖೆಯಿಂದ ಇಂಟರ್ನೆಟ್ ಸೇವಾ ಪೂರೈಕೆದಾರರ ಪರವಾನಗಿ ಪಡೆದುಕೊಂಡಿದೆ. ಇದಾದ ಬಳಿಕ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ.
ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ ಸರ್ಕಾರದ ಮಹತ್ವಾಕಾಂಕ್ಷೆಯ ಐಟಿ ಮೂಲಸೌಕರ್ಯ ಯೋಜನೆಯಾಗಿದ್ದು, ರಾಜ್ಯದ ಪ್ರತಿಯೊಬ್ಬರಿಗೂ ಈ ಮೂಲಕ ಇಂಟರ್ನೆಟ್ ಸೌಲಭ್ಯ ಪಡೆದುಕೊಳ್ಳಬಹುದು. ಸಮಾಜದಲ್ಲಿನ ಡಿಜಿಟಲ್ ವಿಭಜನೆ ನಿವಾರಿಸಲು ಉದ್ದೇಶಿಸಿರುವ ಯೋಜನೆಯು ತನ್ನ ಕೆಲಸವನ್ನು ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಟ್ವೀಟ್ ಮೂಲಕ ಹೇಳಿದ್ದಾರೆ.
ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ @DoT_India ನಿಂದ ISP ಪರವಾನಗಿ ಪಡೆದುಕೊಂಡಿದೆ. ಈಗ ನಮ್ಮ ಪ್ರತಿಷ್ಠಿತ #KFON ಯೋಜನೆಯು ಇಂಟರ್ನೆಟ್ ಅನ್ನು ಮೂಲಭೂತ ಹಕ್ಕನ್ನಾಗಿ ಮಾಡಲು ತನ್ನ ಕಾರ್ಯಾಚರಣೆ ಪ್ರಾರಂಭಿಸಬಹುದು ಎಂದಿದ್ದಾರೆ.
ಬಿಪಿಎಲ್ ಕುಟುಂಬಗಳಿಗೆ, 30,000 ಸರ್ಕಾರಿ ಕಚೇರಿಗಳಿಗೆ ಉಚಿತ ಇಂಟರ್ನೆಟ್: KFON ಯೋಜನೆಯು ಬಿಪಿಎಲ್ ಕುಟುಂಬಗಳಿಗೆ ಮತ್ತು 30,000 ಸರ್ಕಾರಿ ಕಚೇರಿಗಳಿಗೆ ಉಚಿತ ಇಂಟರ್ನೆಟ್ ಒದಗಿಸಲು ಮುಂದಾಗಿದೆ. ಹಿಂದಿನ ಎಡ ಸರ್ಕಾರವು 2019 ರಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮೂಲ ಹಕ್ಕು ಎಂದು ಘೋಷಿಸಿತ್ತು ಮತ್ತು ರೂ 1,548 ಕೋಟಿ KFON ಯೋಜನೆಯನ್ನು ಪ್ರಾರಂಭಿಸಿತ್ತು.
ಇದನ್ನೂ ಓದಿ:ಪತ್ನಿಯಾದವಳು 'ತಾಳಿ' ತೆಗೆದಿಡುವುದು ಪತಿಗೆ ನೀಡುವ ಅತ್ಯುನ್ನತ ಮಾನಸಿಕ ಕ್ರೌರ್ಯ: ಮದ್ರಾಸ್ ಹೈಕೋರ್ಟ್