ಕರ್ನಾಟಕ

karnataka

ETV Bharat / bharat

ಬಲೂನ್ ಮಾರುತ್ತಿದ್ದ ಹುಡುಗಿ ಈಗ ರೂಪದರ್ಶಿ: ರಾತ್ರೋರಾತ್ರಿ ಬದಲಾಯ್ತು ಬಾಲಕಿಯ ಕಿಸ್ಮತ್! - ಬಲೂನ್ ಮಾರುತ್ತಿದ್ದ ಬಾಲಕಿ ಮಾಡೆಲ್​

ಕೇರಳದ ವಿವಿಧೆಡೆ ಬಲೂನ್ ಮಾರಾಟ ಮಾಡುತ್ತಿದ್ದ ಬಾಲಕಿಯೋರ್ವಳು ರಾತ್ರೋರಾತ್ರಿ ಮಾಡೆಲ್​ ಆಗಿದ್ದು, ಫೋಟೋಗ್ರಾಫರ್​ ತೆಗೆದಿದ್ದ ಆಕರ್ಷಕ ಫೋಟೋವೊಂದು ಆಕೆಯ ಜೀವನವನ್ನೇ ಬದಲಿಸಿತು.

Kerala Balloon seller teens become model in overnight
Kerala Balloon seller teens become model in overnight

By

Published : Mar 9, 2022, 3:52 PM IST

ಇದು ಸಾಮಾಜಿಕ ಜಾಲತಾಣಗಳ ಯುಗ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಶರವೇಗದಲ್ಲಿ ಸುದ್ದಿ ವಿಶ್ವಾದ್ಯಂತ ಬಿತ್ತರಗೊಳ್ಳುತ್ತದೆ. ಇದರ ಸಹಾಯದಿಂದಲೇ ಸಾವಿರಾರು ಜನರು ಹೀರೋಗಳಾಗಿದ್ದಾರೆ, ಝೀರೋಗಳಾದವರೂ ಇದ್ದಾರೆ. ಇದೀಗ ನಾವು ಹೇಳಹೊರಟಿರುವ ಸುದ್ದಿ ಅತ್ಯಂತ ಕುತೂಹಲಕಾರಿಯಾಗಿದೆ.

ಹಬ್ಬ-ಹರಿದಿನ, ಜಾತ್ರೆಗಳಲ್ಲಿ ಬಲೂನ್‌ಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಇಲ್ಲೊಬ್ಬ ಬಾಲಕಿ ರಾತ್ರೋರಾತ್ರಿ ರೂಪದರ್ಶಿಯಾಗಿ ಬದಲಾಗಿದ್ದಾಳೆ.

ನಮ್ಮ ಪಕ್ಕದ ಕೇರಳದ ವಿವಿಧ ಪ್ರದೇಶಗಳಲ್ಲಿ ಬಲೂನ್ ಮಾರುತ್ತಾ ಕುಟುಂಬಕ್ಕೆ ಆಧಾರವಾಗಿದ್ದ ರಾಜಸ್ಥಾನದ ಈ ಬಾಲಕಿ ಕೇವಲ ಒಂದೇ ಒಂದು ಆಕರ್ಷಕ ಫೋಟೋದಿಂದ ತಾರೆಯಾಗಿ ಬದಲಾಗಿದ್ದಾಳೆ. ಈಕೆಯ ಫೋಟೋಗಳಿಗೆ ಇನ್ನಿಲ್ಲದ ಬೇಡಿಕೆಯೂ ಬಂದಿದೆ.

ಬಲೂನ್ ಮಾರುತ್ತಿದ್ದ ಈ ಬಾಲಕಿ, ಈಗ ರೂಪದರ್ಶಿ

ಕೇರಳದ ಕಣ್ಣೂರಿನಲ್ಲಿ ನಡೆಯುತ್ತಿದ್ದ ಜಾತ್ರೆಯೊಂದರಲ್ಲಿ ಬಲೂನ್ ಮಾರಾಟ ಮಾಡ್ತಿದ್ದ ಈ ಬಾಲಕಿಯ ಹೆಸರು ಕಿಸ್ಬು. ಇದೇ ಜಾತ್ರೆಯಲ್ಲಿ ಈ ಹುಡುಗಿ ಫೋಟೋಗ್ರಾಫರ್ ಓರ್ವನ ಗಮನ ಸೆಳೆದಿದ್ದಾಳೆ. ಆತನಿಗೆ ಅದೇನನ್ನಿಸಿತೋ ಏನೋ.. ಬಾಲಕಿಯ ಸಹಜ ಭಂಗಿಯಲ್ಲೇ ಫೋಟೋ ಸೆರೆ ಹಿಡಿದುಬಿಟ್ಟ. ಹೀಗೆ ಸೆರೆ ಹಿಡಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಆಗಿದ್ದು ಇಷ್ಟೇ!. ಈ ಫೋಟೋಗೆ ಇನ್ನಿಲ್ಲದ ಪ್ರತಿಕ್ರಿಯೆ ಬರೋಕೆ ಶುರುವಾಗಿದೆ. ಆ ಬಳಿಕ ಬಾಲಕಿಯ ಮೇಕ್​ ಓವರ್ ಫೋಟೋಶೂಟ್​ ನಡೆಸಲಾಗಿದೆ.

ಕೇರಳದ ಸಾಂಪ್ರದಾಯಿಕ ಸೆಟ್​ ಹಾಗೂ ಆಭರಣಗಳನ್ನು ಬಾಲಕಿಗೆ ತೊಡಿಸಿ ಆಕರ್ಷಕ ರೀತಿಯಲ್ಲಿ ಫೋಟೋಶೂಟ್ ನಡೆಸಲಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ವಾಹ್‌! ಎಂಬ ಉದ್ಘಾರದಿಂದ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕಿ ಮಾಡೆಲ್‌ ಆಗಿಯೂ ಬದಲಾಗಿದ್ದಾಳೆ.!

ABOUT THE AUTHOR

...view details