ಕರ್ನಾಟಕ

karnataka

ETV Bharat / bharat

ಬಿಜೆಪಿ ಸೂಚಿಸುವ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧ : ಇ. ಶ್ರೀಧರನ್ - Kerala Assembly Election

ರಾಷ್ಟ್ರ ಸೇವೆ ಮಾಡುವ ಭರವಸೆಯೊಂದಿಗೆ ನಾನು ಬಿಜೆಪಿಗೆ ಸೇರುತ್ತಿದ್ದೇನೆ. ತಟಸ್ಥವಾಗಿರುವುದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ..

ಇ. ಶ್ರೀಧರನ್
ಶ್ರೀಧರನ್​ ಬಿಜೆಪಿಗೆ ಸೇರ್ಪಡೆ

By

Published : Feb 19, 2021, 12:18 PM IST

ತಿರುವನಂತಪುರಂ :ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿರುವ 'ಮೆಟ್ರೋ ಮ್ಯಾನ್' ಎಂದು ಹೆಸರಾದ ಇ. ಶ್ರೀಧರನ್ ಕೇರಳ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶ್ರೀಧರನ್, ಬಿಜೆಪಿ ಸೂಚಿಸುವ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧವಿದ್ದೇನೆ. ಆದ್ರೆ, ನಾನು ಯಾವುದೇ ರ‍್ಯಾಲಿ ಮತ್ತು ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸುವುದಿಲ್ಲ. ಜೊತೆಗೆ ನನಗೆ ಗವರ್ನರ್ ಹುದ್ದೆಯಲ್ಲಿ ಆಸಕ್ತಿ ಇಲ್ಲ ಎಂದು ಶ್ರೀಧರನ್​ ಹೇಳಿದ್ದಾರೆ.

ರಾಷ್ಟ್ರ ಸೇವೆ ಮಾಡುವ ಭರವಸೆಯೊಂದಿಗೆ ನಾನು ಬಿಜೆಪಿಗೆ ಸೇರುತ್ತಿದ್ದೇನೆ. ತಟಸ್ಥವಾಗಿರುವುದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಓದಿ:ಭಾರೀ ಹಿಮಪಾತ.. 447 ಪ್ರವಾಸಿಗರನ್ನು ರಕ್ಷಿಸಿದ ಭಾರತೀಯ ಸೇನೆ

ಶ್ರೀಧರನ್​ ಬಿಜೆಪಿಗೆ ಸೇರ್ಪಡೆಗೊಂಡಿರುವುದರಿಂದ ಸಿಪಿಎಂ ಮತ್ತು ಕಾಂಗ್ರೆಸ್​ನ ಹೆಚ್ಚಿನ ನಾಯಕರು ಬಿಜೆಪಿಗೆ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್​ ಹೇಳಿದ್ದಾರೆ. ಕೇರಳದಾದ್ಯಂತ ಲೆಫ್ಟ್​​ ಡೆಮಾಕ್ರಟಿಕ್​​ ಫ್ರಂಟ್​​ ನೇತೃತ್ವದಲ್ಲಿ ‘ವಿಕಾಸನ ಮುನ್ನೇಟಾ ಜಾಥಾ’ ವಿವಿಧ ಕೇಂದ್ರಗಳಲ್ಲಿ ಪ್ರಾರಂಭವಾಗಿದೆ.

ABOUT THE AUTHOR

...view details