ಕರ್ನಾಟಕ

karnataka

ETV Bharat / bharat

ಮೆಗಾ ವ್ಯಾಕ್ಸಿನೇಷನ್​ ಡ್ರೈವ್ ​: ಒಂದೇ ದಿನ 5.35 ಲಕ್ಷ ಡೋಸ್ ವ್ಯಾಕ್ಸಿನ್​ ನೀಡಿ ಕೇರಳ ದಾಖಲೆ

ಶುಕ್ರವಾರ 1.2 ಲಕ್ಷ ಹಿರಿಯ ನಾಗರಿಕರಿಗೆ ವ್ಯಾಕ್ಸಿನ್​ ನೀಡಲಾಯಿತು. ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭವಾದ ನಂತರ ಸುಮಾರು 5.04 ಲಕ್ಷ ಹಿರಿಯ ನಾಗರಿಕರಿಗೆ ಮೊದಲ ಡೋಸ್ ಪೂರೈಸುವಲ್ಲಿ ಸರ್ಕಾರ ಸಫಲವಾಗಿದೆ..

Kerala
ಮೆಗಾ ವ್ಯಾಕ್ಸಿನೇಷನ್​ ಡ್ರೈವ್

By

Published : Aug 14, 2021, 3:31 PM IST

ತಿರುವನಂತಪುರ :ಕೇರಳ ರಾಜ್ಯವು ಶುಕ್ರವಾರ 5,35,074 ಜನರಿಗೆ ಕೊರೊನಾ ವ್ಯಾಕ್ಸಿನ್​ ನೀಡುವ ಮೂಲಕ ಒಂದೇ ದಿನದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ವ್ಯಾಕ್ಸಿನ್​ ಪಡೆದ 5.3 ಲಕ್ಷ ಜನರಲ್ಲಿ 4,64,849 ಮಂದಿಗೆ ಮೊದಲ ಡೋಸ್​ ನೀಡಲಾಗಿದ್ದರೆ, ಉಳಿದ 70,225 ಜನರಿಗೆ 2ನೇ ಡೋಸ್​ ನೀಡಲಾಗಿದೆ.

ಈ ಹಿಂದೆ ಒಂದೇ ದಿನ ಸುಮಾರು 5.15 ಲಕ್ಷ ಜನರಿಗೆ ಲಸಿಕೆ ನೀಡುವ ಮೂಲಕ ಕೇರಳ ರೆಕಾರ್ಡ್​ ಮಾಡಿತ್ತು. ಇದೀಗ 5.3 ಲಕ್ಷ ಮಂದಿಗೆ ವ್ಯಾಕ್ಸಿನ್​ ನೀಡುವ ಮೂಲಕ ಆ ರೆಕಾರ್ಡ್​ ಬ್ರೇಕ್​ ಮಾಡಿದೆ.

ಈ ಮೆಗಾ ವ್ಯಾಕ್ಸಿನೇಷನ್​ ಕುರಿತು ಪ್ರತಿಕ್ರಿಯಿಸಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಲಸಿಕಾ ಅಭಿಯಾನಕ್ಕೆ ಇನ್ನೂ ಹೆಚ್ಚಿನ ಲಸಿಕೆಗಳ ಅಗತ್ಯವಿದೆ ಎಂದು ಹೇಳಿದರು. ಲಸಿಕಾ ಅಭಿಯಾನದ ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್​ ಹಾಕುವ ಉದ್ದೇಶ ಹೊಂದಲಾಗಿದೆ. ಆಗಸ್ಟ್​ 15ರೊಳಗೆ ಹಾಸಿಗೆ ಹಿಡಿದಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ರೋಗಿಗಳಿಗೆ ವ್ಯಾಕ್ಸಿನ್​ ಹಾಕುವ ಗುರಿ ಇದೆ.

ಶುಕ್ರವಾರ 1.2 ಲಕ್ಷ ಹಿರಿಯ ನಾಗರಿಕರಿಗೆ ವ್ಯಾಕ್ಸಿನ್​ ನೀಡಲಾಯಿತು. ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭವಾದ ನಂತರ ಸುಮಾರು 5.04 ಲಕ್ಷ ಹಿರಿಯ ನಾಗರಿಕರಿಗೆ ಮೊದಲ ಡೋಸ್ ಪೂರೈಸುವಲ್ಲಿ ಸರ್ಕಾರ ಸಫಲವಾಗಿದೆ.

ಕೇರಳವು ಶುಕ್ರವಾರ ಒಟ್ಟು 4,02,400 ಡೋಸ್‌ಗಳನ್ನು ಸ್ವೀಕರಿಸಿದೆ. ಅದರಲ್ಲಿ 3,02,400 ಡೋಸ್‌ಗಳು ಕೋವಿಶೀಲ್ಡ್ ಮತ್ತು 1 ಲಕ್ಷ ಡೋಸ್‌ಗಳು ಕೋವ್ಯಾಕ್ಸಿನ್ ಲಸಿಕೆಗಳಾಗಿವೆ. ಜಿಲ್ಲಾವಾರು ಮಾಹಿತಿ ಪ್ರಕಾರ ತಿರುವನಂತಪುರಂ 1,02,390 ಡೋಸ್​, ಎರ್ನಾಕುಲಂ 1,19,050, ಕೋಯಿಕ್ಕೋಡ್​ 80,960 ಕೋವಿಶೀಲ್ಡ್​ ವ್ಯಾಕ್ಸಿನ್​ ಸ್ವೀಕರಿಸಿವೆ.

ತಿರುವನಂತಪುರಂ ಒಂದು ಲಕ್ಷ COVAXIN ಸಹ ಸ್ವೀಕರಿಸಿದೆ. ಕೇರಳದಲ್ಲಿ ಒಟ್ಟು 1804 ವ್ಯಾಕ್ಸಿನೇಷನ್​ ಸೆಂಟರ್​ಗಳಿವೆ. ಇವುಗಳಲ್ಲಿ 1465 ಸರ್ಕಾರಿ ಹಾಗೂ 339 ಖಾಸಗಿ ಸೆಂಟರ್​ಗಳು ಸೇರಿವೆ.

ಇದನ್ನೂ ಓದಿ:23 ಐಟಿಬಿಪಿ ಸಿಬ್ಬಂದಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಶೌರ್ಯ ಪದಕ ಪ್ರದಾನ

ABOUT THE AUTHOR

...view details